ಚಿಕ್ಕಬಳ್ಳಾಪುರದಲ್ಲೂ ಶಿವನ ಮೂರ್ತಿ: ಕನ್ನಡಿಗರ ಆಕ್ರೋಶ

322

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಈಶ ಫೌಂಡೇಶನ್ ವತಿಯಿಂದ ತಮಿಳುನಾಡಿನ ಕೊಯಮತ್ತೂರನಲ್ಲಿ ಈಗಾಗ್ಲೇ ಬೃಹತ್ ಆದಿಯೋಗಿ ಪ್ರತಿಮೆ ನಿರ್ಮಿಸಲಾಗಿದೆ. ನೂರಾರು ಎಕರೆ ವಿಸ್ತೀರ್ಣದ ಜಾಗವನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಆಗಲೂ ಪರಿಸರ ಪ್ರೇಮಿಗಳು, ಸಾಮಾಹಿಕ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದರು. ಕ್ಯಾರೆ ಅಂದಿಲ್ಲ.

ಈಗ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ112 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಿಸಲಾಗುತ್ತಿದೆ. ಶನಿವಾರ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಚಿವ ಡಾ.ಕೆ ಸುಧಾಕರ್, ನಾಗ ಮಂಟಪ ಉದ್ಘಾಟಿಸಿದ್ದಾರೆ. ಇದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿದೆ. ಕಾವೇರಿ ನೀರು ಹೋರಾಟದಲ್ಲಿ ಮೋಸ, ಮಣ್ಣು ಉಳಿಸುವ ಅಭಿಯಾನದಲ್ಲಿ ಮೋಸ. ಈ ಸದ್ಗುರುನ್ನ ನಂಬಬೇಡಿ ಎಂದು ಟ್ವೀಟ್ ಮಾಡಿದ್ದಾರೆ.

ನಂದಿ ಬೆಟ್ಟ- ಗುನ್ನ ಇಟ್ಟ ಎಂದು ಬರೆಯುವ ಮೂಲಕ ವಿರೋಧ ವ್ಯಕ್ತಪಡಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಅಂಗನವಾಡಿ ಕೇಂದ್ರಗಳು ಬಾಡಿಗೆಯಲ್ಲಿವೆ. ಅದಕ್ಕೆ ಜಾಗ ನೀಡಲು ಆಗುತ್ತಿಲ್ಲ. ಐನೋರ ಶೋಕಿಗಿದೆ ಎಂದು ಕಿಡಿ ಕಾರಲಾಗಿದೆ.




Leave a Reply

Your email address will not be published. Required fields are marked *

error: Content is protected !!