ಡೇವಿಡ್ ಮಿಲ್ಲರ್ ಪುತ್ರಿ ನಿಧನದ ಸುದ್ದಿ ಹಿಂದಿನ ಸತ್ಯವೇನು?

321

ಪ್ರಜಾಸ್ತ್ರ ಕ್ರೀಡಾ ಸುದ್ದಿ

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸಮನ್ ಡೇವಿಡ್ ಮಿಲ್ಲರ್ ಅವರ ಪುತ್ರಿ ನಿಧನರಾಗಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಸ್ವತಃ ಮಿಲ್ಲರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ರಿಪ್ ಮೈ ರಾಕ್ ಸ್ಟಾರ್ ಎಂದು ಬರೆದಿದ್ದಾರೆ ಅನ್ನೋದು ಎಲ್ಲೆಡೆ ವೈರಲ್ ಆಗಿದೆ.

5 ವರ್ಷದ ಮಗು ಇದ್ದಾಗಲೇ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಕಿ ಆ್ಯನೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಮಿಲ್ಲರ್ ಟ್ವೀಟ್ ಮಾಡಿ ಭಾವನಾತ್ಮಕ ವಿಷಯಗಳನ್ನು ಮತ್ತೊಂದು ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಆ್ಯನೆ ಮಿಲ್ಲರ್ ಮಗಳು ಅಲ್ಲ. ಬಾಲಕಿ ಡೇವಿರ್ ಮಿಲ್ಲರ್ ಅಪ್ಪಟ ಅಭಿಮಾನಿ.

ಮಿಲ್ಲರ್, ಪುಟಾಣಿ ಅಭಿಮಾನಿಯ ಜೊತೆಗಿನ ಹಲವು ಫೋಟೋಗಳನ್ನು ನೋಡಿ ಅವರ ಮಗಳೊಂದುಕೊಂಡಿದ್ದಾರೆ. ಆದರೆ, ಅಸಲಿ ಕಥೆ ಬೇರೆ. ಹೀಗಾಗಿ ಕೆಲವರು ಮಿಲ್ಲರ್ ಮಗಳು ನಿಧನವೆಂದು ಹೇಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಧ್ಯ ಡೇವಿಡ್ ಮಿಲ್ಲರ್ ಇಂಡಿಯಾ ವಿರುದ್ಧದ ಸರಣಿಯಲ್ಲಿ ಆಡುತ್ತಿದ್ದಾರೆ. ಭರ್ಜರಿ ಫಾರ್ಮ್ ನಲ್ಲಿರುವ ಮಿಲ್ಲರ್ ಟಿ-20 ಸರಣಿಯಲ್ಲಿ ಶತಕ ಸಿಡಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದಾರೆ. ಈಗ 2ನೇ ಪಂದ್ಯಕ್ಕೆ ಸಜ್ಜಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!