ಹೊಸ ಲೋಕ ದರ್ಶನದ ‘ಗಂಧದಗುಡಿ’

184

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಗಂಧದಗುಡಿ ಟ್ರೇಲರ್ ರಿಲೀಸ್ ಆಗಿದೆ. ಪಿಆರ್ ಕೆ ಆಡಿಯೋ ಸಂಸ್ಥೆಯ ಯುಟ್ಯೂಬ್ ಚಾನಲ್ ನಲ್ಲಿ ಟ್ರೇಲರ್ ರಿಲೀಸ್ ಆಗಿದ್ದು, ಹೊಸ ಲೋಕ ದರ್ಶನವನ್ನು ಮಾಡಿಸುತ್ತಿದೆ. ಮನುಷ್ಯ ಜಗತ್ತು ಬಿಟ್ಟು ಉಳಿದೆಲ್ಲವೂ ಅದೆಷ್ಟು ಸೊಗಸು ಅನ್ನೋದನ್ನು ಇಲ್ಲಿ ಕಟ್ಟಿಕೊಡಲಾಗಿದೆ.

ಇದೊಂದು ಸಿನಿಮಾ, ಸಾಕ್ಷ್ಯಚಿತ್ರ ಅಥವ ಮತ್ತೊಂದು ಎಂದು ಹೇಳುವ ಬದಲು ಅಪ್ಪು ಬದುಕಿನ ಅದ್ಭುತ ಜರ್ನಿ ಎನ್ನಬಹುದು. ಜೊತೆಗಿರುವ ಜೀವ ಎಂದಿಗೂ ಜೀವಂತ ಅನ್ನೋ ಮಾತಿನಂತೆ ಅಪ್ಪು ಎಂದೆಂದಿಗೂ ಎಲ್ಲರ ಮನದಲ್ಲಿದ್ದಾರೆ. ಈ ಟ್ರೇಲರ್ ನೋಡಿದ ಮೇಲೆ ಪ್ರತಿಯೊಬ್ಬರಿಗೂ ಮತ್ತಷ್ಟು ಖುಷಿಯಾಗಿದೆ.

ಅಮೋಘವರ್ಷ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪಿಆರ್ ಕೆ ಪ್ರೊಡೆಕ್ಷನ್ ಮೂಲಕ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಣ ಮಾಡಿದ್ದಾರೆ. ಬಿ.ಅಜನೀಶ್ ಲೋಕನಾಥ್ ಮ್ಯೂಸಿಕ್ ಇದೆ. ಅಕ್ಟೋಬರ್ 28ಕ್ಕೆ ಥಿಯೇಟರ್ ಗೆ ಗಂಧದಗುಡಿ ಲಗ್ಗೆ ಇಡಲಿದೆ.




Leave a Reply

Your email address will not be published. Required fields are marked *

error: Content is protected !!