ಅಧಿವೇಶನದ ಕಲಾಪ ನುಂಗಿ ಹಾಕುವ ಪಾಲಿ‘ಟ್ರಿಕ್ಸ್’!

364

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನ ರೆಬಲ್ ಶಾಸಕರು ರಾಜೀನಾಮೆ ಸಲ್ಲಿಕೆಯ ನಡುವೆಯೂ ಇಂದು ಬಜೆಟ್ ಅಧಿವೇಶನ ಶುರುವಾಗಲಿದೆ. ಈ ವೇಳೆ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿ ಸಜ್ಜಾಗಿದೆ. ಹೀಗಾಗಿ ವಿಧಾನೌಧದಲ್ಲಿ ದೊಡ್ಡ ಮಟ್ಟದ ಕೋಲಾಹಲ ನಡೆಯುವ ಸಾಧ್ಯತೆಯಿದೆ.

ಕಲಾಪ ಆರಂಭ ದಿನವಾದ ಇಂದು ಬಿಜೆಪಿ ಗಲಾಟೆ ನಡೆಸುವ ಸಾಧ್ಯತೆಯನ್ನ ತಳ್ಳಿ ಹಾಕುವಂತೆಯಿಲ್ಲ. ಸಿಎಂ ರಾಜೀನಾಮೆ ಕೇಳಬಹುದು. ರಾಜ್ಯದಲ್ಲಿ ಅನೇಕ ಜಿಲ್ಲೆಗಳಲ್ಲಿ ಬರಗಾಲದ ಪರಿಸ್ಥಿತಿ ಇನ್ನೂ ಇದೆ. ಹೀಗಿದ್ರೂ, ಮೈತ್ರಿ ಸರ್ಕಾರ ಸರಿಯಾಗಿ ಕೆಲಸ ಮಾಡ್ತಿಲ್ಲ. ಇದರ ನಡುವೆ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹೀಗಾಗಿ ಸಿಎಂ ರಾಜೀನಾಮಗೆ ಬಿಜೆಪಿ ಪಟ್ಟು ಹಿಡಿಯಬಹುದು.

ಇಂದು ಬಹುಮಖ್ಯವಾದ ಹಣಕಾಸು ಮಸೂದೆಯನ್ನ ಮಂಡಿಸಲು ಸರ್ಕಾರ ರೆಡಿಯಾಗಿದೆ. ಹೀಗಾಗಿ ಈ ವಿಷಯದ ಮೇಲೆ ಇದೀಗ ಎಲ್ಲರ ಗಮನವಿದೆ. ಇದರ ನಡುವೆ ಸಿಎಂ ಕುಮಾರಸ್ವಾಮಿ ಅವರು, ಅತೃಪ್ತರ ನಡೆಯನ್ನ ಪ್ರಶ್ನಿಸಿ ಹಾಗೂ ದೋಸ್ತಿ ಸರ್ಕಾರ ಕೆಡುವಲು ಬಿಜೆಪಿ ಮಾಡ್ತಿರುವ ರಣತಂತ್ರದ ಬಗ್ಗೆ ಭಾವನಾತ್ಮಕವಾಗಿ ಮಾತ್ನಾಡುವ ಸಾಧ್ಯತೆಯಿದೆ. ಹೀಗಾಗಿ ಬಜೆಟ್ ಅಧಿವೇಶನದ ಮೊದಲ ದಿನದ ಕಲಾಪ ರಾಜ್ಯ ರಾಜಕೀಯ ನಾಯಕರ  ಪಾಲಿ‘ಟ್ರಿಕ್ಸ್’ಗೆ ಬಲಿಯಾಗುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!