ಕರೋನಾ ಕಾರ್ಮೋಡ: ಇಟಲಿ, ರಷ್ಯ ಹಿಂದಿಕ್ಕಿದ ಭಾರತ

556

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕರೋನಾ ವಿಚಾರದಲ್ಲಿ ಭಾರತ ಎಲ್ಲೋ ಹಳಿ ತಪ್ಪುತ್ತಿದೆ ಅನ್ನೋ ಲಕ್ಷಣಗಳು ಕಾಣ್ತಿವೆ. ಯಾಕಂದ್ರೆ, ಕಳೆದ 24 ಗಂಟೆಯಲ್ಲಿ ಮತ್ತೆ 9,887 ಸೋಂಕು ಪತ್ತೆಯಾಗಿವೆ. ಅಲ್ದೇ 294 ಜನರು ಸಾವನ್ನಪ್ಪಿದ್ದಾರೆ.

ಇನ್ನು ದೇಶದಲ್ಲಿ ಸೋಂಕಿತರ ಸಂಖ್ಯೆ 2,36,781ಕ್ಕೆ ಏರಿಕೆಯಾಗಿದೆ. ಸಾವು 6,649 ಆಗಿದೆ. 1,14,073 ಜನರು ಗುಣಮುಖರಾಗಿದ್ದಾರೆ. 1,16,059 ಜನರಿಗೆ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ, ಸೋಂಕಿನ ವಿಚಾರದಲ್ಲಿ ಭಾರತ ಇಟಲಿಯನ್ನ ಮೀರಿಸಿದೆ. ಇಟಲಿಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ ದಾಖಲಾಗಿರುವುದು 2,34,531. ಭಾರತದಲ್ಲಿ 2,36,781.

ಸಾವಿನ ವಿಚಾರದಲ್ಲಿ ಇಟಲಿ 33,774 ದಾಟಿದೆ. ಭಾರತ ರಷ್ಯ ಮೀರಿಸಿದ್ದು ಅಲ್ಲಿ 5,528 ಇದ್ರೆ, ನಮ್ಮಲ್ಲಿ 6,649 ಇದೆ. ಈ ಮೂಲಕ ಭಾರತ ಇದೀಗ 6ನೇ ಸ್ಥಾನಕ್ಕೆ ಬಂದು ನಿಂತಿದೆ. ಹೀಗೆ ಏರುಗತಿಯಲ್ಲಿ ಹೋಗುವುದನ್ನ ನಿಲ್ಲಿಸಬೇಕಾಗಿದೆ. ಇಲ್ಲದೆ ಹೋದರೆ, ಮುಂದಿನ ದಿನಗಳಲ್ಲಿ ಭಾರತ ಬಹುದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತೆ. ಯಾಕಂದ್ರೆ, ಭಾರತದ ಜನಸಂಖ್ಯೆ 130 ಕೋಟಿಗೂ ಅಧಿಕವಿದೆ.




Leave a Reply

Your email address will not be published. Required fields are marked *

error: Content is protected !!