ಅಪಘಾತದಲ್ಲಿ ತಾಲಾ ಅಜಿತಗೆ ಗಾಯ

311

ತಮಿಳು ಸಿನಿ ದುನಿಯಾದ ಸ್ಟಾರ್ ನಟ ತಾಲಾ ಅಜಿತ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಇದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಹೆಚ್.ವಿನೋದ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟ ಅಜಿತ ನಟಿಸ್ತಿದ್ದಾರೆ. ಈ ವೇಳೆ ಬೈಕ್ ಅಪಘಾತವಾಗಿದೆ.

ಚೆನ್ನೈನಲ್ಲಿ ನಡೆಯುತ್ತಿದ್ದ ಸಾಹಸ ಶೂಟಿಂಗ್ ನಲ್ಲಿ ನಟ ಅಜಿತ ಓಡಿಸ್ತಿದ್ದ ಬೈಕ್ ಸ್ಕಿಡ್ ಆಗಿದೆ. ಇದ್ರಿಂದಾಗಿ ಅವರಿಗೆ ಒಂದಿಷ್ಟು ಗಾಯಗಳಾಗಿವೆ. ಇದೀಗ ಚಿಕಿತ್ಸೆ ಪಡೆದಿದ್ದು, ಕೆಲ ದಿನಗಳ ಕಾಲ ರೆಸ್ಟ್ ಮಾಡಲು ವೈದ್ಯರು ಸೂಚಿಸಿದ್ದಾರೆ. ಅದೇನೇ ಇರ್ಲಿ, ಈ ಘಟನೆಯಿಂದ ನಟ ಅಜಿತ ಫ್ಯಾನ್ಸ್ ಬೆಸರಗೊಂಡಿದ್ದಾರೆ. ಬೇಗ ಗುಣಮುಖರಾಗಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!