ಹಗರಣಗಳ ಕೊಂಪೆ ಸಿಂದಗಿ ಪುರಸಭೆ: ಮತ್ತಷ್ಟು ನಕಲಿ ಸಹಿ ಗೋಲ್ ಮಾಲ್

494

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪುರಸಭೆಯಲ್ಲಿ ಒಂದಲ್ಲ ಒಂದು ಗೋಲ್ ಮಾಲ್ ನಡೆಯುತ್ತಲೇ ಇವೆ. ಈಗಾಗ್ಲೇ ಮೂವರು ಸಿಬ್ಬಂದಿ ಅಮಾನತುಗೊಂಡಿದ್ದು, ಬೇರೆ ಕಡೆ ನಿಯೋಜಿಸಲಾಗಿದೆ. ಇದರ ಜೊತೆಗೆ ಮುಖ್ಯಾಧಿಕಾರಿ ಅವರಂತೆಯೇ ಚೆಕ್ ಮೇಲೆ ನಕಲಿ ಸಹಿ ಮಾಡಿ ಲಕ್ಷಾಂತರ ರೂಪಾಯಿ ಡ್ರಾ ಮಾಡಿಕೊಂಡ ಪ್ರಕರಣ ನಡೆದಿದೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದೀಗ ಮತ್ತೊಂದು ಕರ್ಮಕಾಂಡ ಬಯಲಿಗೆ ಬಂದಿದ್ದು, ಹಾಜರಾತಿಯಲ್ಲಿ ನಕಲಿ ಸಹಿ ಮಾಡಲಾಗಿದೆ. ಹಿರಿಯ ಆರೋಗ್ಯಾಧಿಕಾರಿ ಎ.ಎಸ್ ಪಾಂಡೆ, ಕಂದಾಯ ನಿರೀಕ್ಷಕ ಸಿ.ಕೆ ಕಾಂಬ್ಳೆ, ಕಿರಿಯ ಆರೋಗ್ಯ ನಿರೀಕ್ಷಕರಾದ ಎನ್.ಎಚ್ ಉಸ್ತಾದ, ಐ.ಐ ಮಣೂರ ಅವರ ನಕಲಿ ಸಹಿ ಮಾಡಲಾಗಿದೆ. ಆಗಸ್ಟ್ 27 ರಿಂದ 30ರ ತನಕ ಹಾಜರಾತಿಯಲ್ಲಿ ಸಿಬ್ಬಂದಿ ಬರುವ ಮೊದ್ಲೇ ಸಹಿ ಮಾಡಲಾಗಿದೆ.

ಇನ್ನು ಸಿಬ್ಬಂದಿ ಎಸ್.ಎ ಬಿಸನಾಳ, ಆರ್,ಎಚ್ ಬಾವಾ ಎಂಬುವರ ನಕಲಿ ಸಹಿ ಕೂಡ ಆಗಸ್ಟ್ 27ರಂದು ಮಾಡಲಾಗಿದೆ. ಹೀಗಾಗಿ ಪುರಸಭೆಯಲ್ಲಿ ಒಂದಲ್ಲ ಒಂದು ನಕಲಿ ಸಹಿಯ ರಾಡಿ ಹೊರಗೆ ಬರ್ತಿದೆ. ಕಾರಣ, ಇಲ್ಲಿನ ಸಿಸಿ ಕ್ಯಾಮೆರಾಗಳು ಕೆಲಸವೇ ಮಾಡ್ತಿಲ್ಲ. ಅದು ಅಲ್ಲದೇ ಹಾಜರಾತಿ ಮಾಡುವ ರೂಮಿನಲ್ಲಿಯೂ ಸಹ ಸಿಸಿ ಕ್ಯಾಮೆರಾ ಇಲ್ಲದ ಕಾರಣ, ಆ ರೂಮಿನಲ್ಲಿ ನಕಲಿ ಸಹಿ ಗೋಲ್ ಮಾಲ್ ಭರ್ಜರಿಯಾಗಿ ನಡೆಯುತ್ತಿದೆ. ಕೂಡಲೇ ಇದಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕಿದೆ.




Leave a Reply

Your email address will not be published. Required fields are marked *

error: Content is protected !!