ಸಿಂದಗಿ ಪುರಸಭೆ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ಕಥೆ ಏನು?

635

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪುರಸಭೆ ಅಧ್ಯಕ್ಷರ ವಿರುದ್ಧದ ಆವಿಶ್ವಾಸ ಗೊತ್ತುವಳಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಗುಪ್ತ ಮತದಾನ ನಡೆದಿದೆ. ಈ ಪ್ರಕರಣ ಕೋರ್ಟ್ ಅಂಗಳದಲ್ಲಿ ಇರುವುದರಿಂದ ಕೋರ್ಟ್ ಆದೇಶದಂತೆ ಗುಪ್ತ ಮತದಾನ ನಡೆಸಲಾಗಿದೆ. ನವೆಂಬರ್ 24ರಂದು ನ್ಯಾಯಾಲಯದ ಆದೇಶ ಬಂದ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ.

ಇಂದು ಮುಂಜಾನೆ 11 ಗಂಟೆಗೆ ವಿಶೇಷ ಸಾಮಾನ್ಯ ಸಭೆ ಪ್ರಾರಂಭವಾಗಿ ಸುಮಾರು 1 ಗಂಟೆಗಳ ಹೆಚ್ಚು ಕಾಲ ನಡೆಯಿತು. ಹೀಗಾಗಿ ಪುರಸಭೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತಿ ನಿಯೋಜನೆ ಮಾಡಲಾಗಿತ್ತು. ಸುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬ್ಯಾರಿಕೇಡ್ ಹಾಕಲಾಗಿತ್ತು.

ಕಳೆದ ಹಲವು ದಿನಗಳಿಂದ ಕುತೂಹಲ ಮೂಡಿಸಿರುವ ಅಧ್ಯಕ್ಷಗಿರಿ ಪಟ್ಟದ ಜಿದ್ದಾಜಿದ್ದಿ ಕೊನೆಯ ಹಂತಕ್ಕೆ ಬಂದಿದ್ದು, ಸಿಂದಗಿ ಪುರಸಭೆ ಚುಕ್ಕಾಣಿಯನ್ನು ಯಾರು ಹಿಡಿತಾರೆ ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!