ಇಂದು 9,217 ಜನರಲ್ಲಿ ಕೋವಿಡ್ ದೃಢ

263

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 9,217 ಜನರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇದರೊಂದಿಗೆ 4,30,947ಕ್ಕೆ ಏರಿಕೆಯಾಗಿದೆ. ಇಂದು 7021 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 3,22,454 ಜನರು ಇದುವರೆಗೂ ಗುಣಮುಖರಾಗಿದ್ದಾರೆ.

ಇನ್ನು 101537 ಪ್ರಕರಣಗಳು ಸಕ್ರಿಯವಾಗಿವೆ. ಇಂದು 129 ಜನರು ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 6,937ಕ್ಕೆ ಏರಿಕೆಯಾಗಿದೆ. 768 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ..

ಬಾಗಲಕೋಟೆ 77, ಬಳ್ಳಾರಿ 375, ಬೆಳಗಾವಿ 263, ಬೆಂ.ಗ್ರಾ 77, ಬೆಂ.ನ 3,161, ಬೀದರ 98, ಚಾಮರಾಜನಗರ 62, ಚಿಕ್ಕಬಳ್ಳಾಪುರ 167, ಚಿಕ್ಕಮಗಳೂರು 111, ಚಿತ್ರದುರ್ಗ 142, ದ.ಕ 350, ದಾವಣಗೆರೆ 297, ಧಾರವಾಡ 264, ಗದಗ 180, ಹಾಸನ 218, ಹಾವೇರಿ 190, ಕಲಬುರಗಿ 243, ಕೊಡಗು 61, ಕೋಲಾರ 104, ಕೊಪ್ಪಳ 139, ಮಂಡ್ಯ 249, ಮೈಸೂರು 635, ರಾಯಚೂರು 107, ರಾಮನಗರ 126, ಶಿವಮೊಗ್ಗ 549, ತಮಕೂರು 365, ಉಡುಪಿ 227, ಉ.ಕ 214, ವಿಜಯಪುರ 63, ಯಾದಗಿರಿ 103 ಜನರಲ್ಲಿ ಕೋವಿಡ್ 19 ದೃಢಪಟ್ಟಿದೆ.




Leave a Reply

Your email address will not be published. Required fields are marked *

error: Content is protected !!