ಸದಸ್ಯನಿಂದಲೇ ಸಿಂದಗಿ ಪುರಸಭೆಗೆ ಬೀಗ

248

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಾರ್ಡ್ ಸಮಸ್ಯೆಗಳ ಕುರಿತು ಜನರು ಆಯಾ ವಾರ್ಡ್ ಸದಸ್ಯರು, ಪುರಸಭೆ, ಸಂಬಂದಪಟ್ಟ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುವುದು ಸಾಮಾನ್ಯ. ಈ ಹಿಂದೆ ಸಾರ್ವಜನಿಕರು ಪುರಸಭೆಗೆ ಬೀಗ ಹಾಕಿರುವ ಘಟನೆ ನಡೆದಿದೆ. ಆದರೆ, ಈ ಬಾರಿ ಸದಸ್ಯನಿಂದಲೇ ಪುರಸಭೆ ಕಾರ್ಯಾಲಯಕ್ಕೆ ಬೀಗ ಬಿದ್ದಿದೆ.

ಹೌದು, ಪುರಸಭೆಯಲ್ಲಿನ ಅಕ್ರಮ ವ್ಯವಹಾರ ಹಾಗೂ ಸೂತ್ರವಿಲ್ಲದ ಗಾಳಿಪಟದಂತಾಗಿರುವ ಆಡಳಿತ ವ್ಯವಸ್ಥೆ ವಿರುದ್ಧ 18ನೇ ವಾರ್ಡ್ ಸದಸ್ಯ ರಾಜಣ್ಣ ನಾರಾಯಣಕರ ಪುರಸಭೆ ಕಾರ್ಯಾಲಯಕ್ಕೆ ಬುಧವಾರ ಬೀಗ ಹಾಕಿ ಪ್ರತಿಭಟಿಸಿದ್ದಾರೆ. ನನ್ನ ವಾರ್ಡಿನಲ್ಲಿ 1,800 ನಿವಾಸಿಗಳಿದ್ದಾರೆ. ಅವರ ಮೂಲಭೂತ ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ. ನೀರಿನ ಪೈಪ್ ಸಮಸ್ಯೆ, ಬೀದಿ ದೀಪದ ಬಗ್ಗೆ ಮುಖ್ಯಾಧಿಕಾರಿಗೆ ಹೇಳಿದರೂ ಸ್ಪಂದಿಸಿಲ್ಲ. ಸ್ವಂತ ಹಣದಲ್ಲಿ ಬೀದಿ ದೀಪಗಳನ್ನು ಖರೀದಿಸಿರುವೆ. ಅದರ ಬಿಲ್ ನೀಡುತ್ತಿಲ್ಲವೆಂದು ಸದಸ್ಯ ರಾಜಣ್ಣ ನಾರಾಯಣಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಕದ 17ನೇ ವಾರ್ಡಿಗೆ ಬೀದಿ ದೀಪ ವ್ಯವಸ್ಥೆ ಮಾಡಲಾಗಿದೆ. ನಮ್ಮ ವಾರ್ಡಿಗೆ ತಾರತಮ್ಯ ಮಾಡಲಾಗುತ್ತಿದೆ ಅಂತಾ ಆರೋಪಗಳ ಸುರಿಮಳೆ ಸುರಿಸಿದರು. ಬಳಿಕ ಇತರೆ ಸದಸ್ಯರು ಇವರ ಮನವೊಲಿಸಿ ಬೀಗ ತೆರೆಯುವ ಕೆಲಸ ಮಾಡಿದರು.




Leave a Reply

Your email address will not be published. Required fields are marked *

error: Content is protected !!