ಸಿಂದಗಿ ಪುರಸಭೆ ಅಧ್ಯಕ್ಷ ಕುರ್ಚಿಗೆ ಒಂದೂವರೆ ಕೋಟಿನಾ?

830

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಭರ್ಜರಿ ಪೈಪೋಟಿ ನಡೆದಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಕೋಟಿ ಲೆಕ್ಕದಲ್ಲಿ ವ್ಯವಹಾರವಂತೆ. ಮೀಸಲಾತಿ ಪ್ರಶ್ನಿಸಿ ಇತರರು ಕೋರ್ಟ್ ಗೆ ಹೋಗ್ಲಿಲ್ಲಂದ್ರೆ ಈಗಾಗ್ಲೇ ಚುನಾವಣೆ ಮುಗಿದು ಹೋಗ್ತಿತ್ತು. ಯಾರು ಅಧ್ಯಕ್ಷ, ಉಪಾಧ್ಯಕ್ಷ ಅನ್ನೋದು ಕ್ಲಿಯರ್ ಆಗ್ತಿತ್ತು.

ಒಂದೂವರೆ ಕೋಟಿ ಲೆಕ್ಕಾಚಾರ!

ಮೀಸಲಾತಿ ಅರ್ಜಿಯ ವಿಚಾರಣೆ ಕೋರ್ಟ್ ನಲ್ಲಿರುವುದ್ರಿಂದ ಸದಸ್ಯರನ್ನ ಕಂಟ್ರೋಲ್ ಮಾಡೋದು ಪಕ್ಷಗಳ ಮುಖಂಡರಿಗೆ ತಲೆನೋವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಅಧ್ಯಕ್ಷ ಸ್ಥಾನಕ್ಕೆ ಫೈಟ್ ನಡೆಯುತ್ತಿದ್ದು, ಕಾಂಗ್ರೆಸ್ ನ ಒಂದಿಬ್ಬರು ಒಂದೂವರೆ ಕೋಟಿವರೆಗೂ ಖರ್ಚು ಮಾಡಲು ರೆಡಿ ಇದ್ದಾರೆ ಎಂದು ಹೇಳಲಾಗ್ತಿದೆ. ಆದ್ರೂ ಎದೆ ಬಡಿತ ಢವಢವ ಅನ್ನೋದು ನಿಂತಿಲ್ಲ.

ಕಾಂಗ್ರೆಸ್ ಬಳಿಯೂ ರೊಕ್ಕಾ.. ಜೆಡಿಎಸ್ ಬಳಿಯೂ ರೊಕ್ಕಾ:

ಕಾಂಗ್ರೆಸ್ ನಿಂದ ಆಯ್ಕೆಯಾದ ಸದಸ್ಯರಲ್ಲಿ ಕೆಲ ಸದಸ್ಯರು ಊರೂರು ಸುತ್ತುತ್ತಾ ಮಜಾ ಮಾಡ್ತಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಮುಖಂಡರಿಂದ ಹಣ ಪಡೆದು ಹೋದವರು, ಜೆಡಿಎಸ್ ನವರ ಬಳಿ ಹೋಗಿ ಅವರಿಗೂ ಬೆಂಬಲ ಕೊಡ್ತಿವೆಂದು ಹೇಳಿ ಅವರ ಬಳಿಯೂ ಹಣ ಪಡೆದು ಹೋಗಿದ್ದಾರೆ ಎಂದು ಹೇಳಲಾಗ್ತಿದೆ. ಹೀಗಾಗಿ ನಾಯಕರು ಯಾರನ್ನ ನಂಬುವುದು ಬಿಡುವುದು ಅಂತಿದ್ದಾರೆ.

‘ಕಮಲ’ಕ್ಕ ‘ತೆನೆ’ ಹೊತ್ತು ಹೋದ್ರಂತೆ!

ಇನ್ಮು ಬಿಜೆಪಿಯ ಸದಸ್ಯರೊಬ್ಬರು ಜೆಡಿಎಸ್ ಗೆ ಜೈ ಎಂದು ಹೇಳಿ ಅವರ ಪಕ್ಷದ ಅಧ್ಯಕ್ಷ ಹುದ್ದೆ ಆಕಾಂಕ್ಷಿಗೆ ಬೆಂಬಲ ನೀಡುತ್ತೇವೆ ಎನ್ನುತ್ತಿದ್ದಾರಂತೆ. ಒಟ್ನಲ್ಲಿ ಸಿಂದಗಿ ಪುರಸಭೆ ಅಧ್ಯಕ್ಷ ಸ್ಥಾನಕ್ಕಾಗಿ ಭಾರಿ ವ್ಯಾಪಾರ ನಡೆದಿದೆ.

ಪಕ್ಷ, ತತ್ವ ಸಿದ್ದಾಂತ ಅನ್ನೋದು ಏನೂ ಇಲ್ಲ. 10 ಕೊಟ್ರೆ ಈ ಕಡೆ 20 ಕೊಟ್ರೆ ಆ ಕಡೆ ಎನ್ನುತ್ತಾ ಬಜಾರದಲ್ಲಿ ಮಾರಾಟಕ್ಕೆ ನಿಂತಿರುವುದು ಮಾತ್ರ ಅಸಹ್ಯ ಎಂದು ಪಟ್ಟಣದ ಜನತೆ ಮಾತ್ನಾಡಿಕೊಳ್ಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!