‘ದುಬಾರಿ’ಯಾದ ಧ್ರುವ

327

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ಪೊಗರು ಮೂವಿ ಈಗಾಗ್ಲೇ ಸಾಕಷ್ಟು ಸದ್ದು ಮಾಡ್ತಿದೆ. ಇದರ ನಡುವೆ ಅಭಿಮಾನಿಗಳಿಗೆ ಮತ್ತೊಂದು ಗುಡ್ ನೀಡಿದ್ದಾರೆ.

ಯೆಸ್, ನಟ ಧ್ರುವ ಸರ್ಜಾ ದುಬಾರಿ ನಟನಾಗಿದ್ದಾರೆ. ಹೀಗೆ ಹೇಳಿದ ತಕ್ಷಣ ನಿಮ್ಗೆ ಅನಿಸುವುದು ನಟ ಧ್ರುವ ಸಂಭಾವನೆ ಹೆಚ್ಚಾಗಿದೆ ಎಂದು. ಬಟ್, ಇದು ಸಂಭಾವನೆ ವಿಚಾರ ಅಲ್ಲ. ಧ್ರುವ ನಟನೆಯ ಮುಂದಿನ ಚಿತ್ರದ ಹೆಸರೇ ದುಬಾರಿ ಎಂದು.

ಪೊಗರು ಚಿತ್ರ ನಿರ್ದೇಶನ ಮಾಡ್ತಿರುವ ನಂದಕಿಶೋರ ಅವರೆ ಈ ಮೂವಿಗೂ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಉದಯ ಮೆಹ್ತಾ ಬಂಡವಾಳ ಹೂಡಿಕೆ ಮಾಡ್ತಿದ್ದಾರೆ. ದುಬಾರಿ ಚಿತ್ರಕ್ಕೆ ಐ ಯಾಮ್ ಟೂ ಆಯ್ತು ಕಾಸ್ಟ್ಲಿ ಅನ್ನೋ ಟ್ಯಾಗ್ ಲೈನ್ ಇಡಲಾಗಿದೆ. ಸೋ ಇನ್ಮುಂದೆ ಧ್ರುವ ಫ್ಯಾನ್ಸ್ ನಾನು ದುಬಾರಿ ಹುಡ್ಗ ಎಂದು ಹೇಳಿಕೊಳ್ಳಬಹುದು.




Leave a Reply

Your email address will not be published. Required fields are marked *

error: Content is protected !!