ಬ್ರೇಕಿಂಗ್ ನ್ಯೂಸ್: ಕಸದರಾಶಿ ನಡುವೆ 300 ಸಿನಿಮಾ ಮಾಡಿದ ಹಿರಿಯ ನಟಿಯ ಮೃತದೇಹ

503

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ರಂಗಭೂಮಿಯ ಮೂಲಕ ಸಿನಿಮಾ ರಂಗಕ್ಕೆ ಬಂದು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹಿರಿಯ ನಟಿ ಬಿ.ಜಯಾ ಅವರು ಗುರುವಾರ ನಿಧನರಾಗಿದ್ದಾರೆ. ಆದ್ರೆ, ಅವರು ಮೃತದೇಹವನ್ನ ಕಸದರಾಶಿ ನಡುವೆ ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ. ಚಾಮರಾಜಪೇಟೆ ಚಿತಾಗಾರದ ಬಳಿ ಹಿರಿಯ ನಟಿ ಬಿ.ಜಯಾ ಅವರ ಮೃತದೇಹ ಇಟ್ಟು ಹೋಗಲಾಗಿದೆ.

ನಿಜಕ್ಕೂ ಅತ್ಯಂತ ದುರಂತದ ಸಂಗತಿ. ಕನ್ನಡ ಚಿತ್ರರಂಗದ ಹಿರಿಯ ನಟಿಯ ಕೊನೆಯ ಘಳಿಗೆಯಲ್ಲಿ ಈ ರೀತಿಯಾಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದವ ವಿರುದ್ಧ ಕಿಡಿ ಕಾರಿದ್ದಾರೆ. ಕುಟುಂಸ್ಥರು ಎಲ್ಲಿ ಹೋದರು, ಯಾರು, ಯಾಕೆ ಹೀಗೆ ಮಾಡಿದ್ದಾರೆ. ಹಿರಿಯ ನಟಿಗೆ ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಲು ಆಗಲಿಲ್ವಾ ಎಂದು ಆಕ್ರೋಶ ಹೊರ ಹಾಕಿದ್ದಾರೆ.




Leave a Reply

Your email address will not be published. Required fields are marked *

error: Content is protected !!