ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ದೂದ್ ಪೇಡಾ ದಿಗಂತ ನಟನೆಯ ಹುಟ್ಟು ಹಬ್ಬದ ಶುಭಾಶಯಗಳು ಚಿತ್ರದ ಟೀಸರ್ ರಿಲೀಸ್ ಗೆ ಪ್ಲಾನ್ ಮಾಡಲಾಗಿದೆ. ಮಾರ್ಚ್ 5ರಂದು ಚಿತ್ರ ತಂಡ ಟೀಸರ್ ರಿಲೀಸ್ ಮಾಡಲಿದೆ. ಈ ಬಗ್ಗೆ ನಟ ದಿಗಂತ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಟೀಸರ್ ಬಗ್ಗೆ ಬರೆದಿರುವ ದಿಗಂತ ದಿ ರಿಯಲ್ ಗೇಮ್ ಬಿಗೇನ್ಸ್ ನವ್ ಎಂದಿದ್ದಾರೆ. ದಿಗಂತಗೆ ಜೋಡಿಗೆ ನಟಿ ಕವಿತಾಗೌಡ ಕಾಣಿಸಿಕೊಂಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಎಂದು ಹೇಳಲಾಗ್ತಿದೆ. ನಾಗರಾಜ ಬೇತೂರ ನಿರ್ದೇಶನ ಮಾಡ್ತಿದ್ದು, ಟಿ.ಆರ್ ಚಂದ್ರಶೇಖರ ನಿರ್ಮಾಣ ಮಾಡ್ತಿದ್ದಾರೆ.