ಜು.8ಕ್ಕೆ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಹಾಡು ರಿಲೀಸ್

282

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ದಿಗಂತ ಅಭಿನಯದ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗಿದೆ. ಜುಲೈ 8ರ ಮಧ್ಯಾಹ್ನ 1ಗಂಟೆಗೆ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.

ನಟ ದಿಗಂತ ಜೊತೆ ಪತ್ನಿ ಐಂದ್ರಿತಾ ರೈ ಕಾಣಿಸಿಕೊಳ್ತಿದ್ದಾರೆ. ಈ ಮೂಲಕ 7 ವರ್ಷಗಳ ಬಳಿಕ ಈ ಜೋಡಿ ಒಟ್ಟಿಗೆ ನಟಿಸಿದ್ದಾರೆ. ನಟಿ ರಂಜನಿ ರಾಘವನ್ ಸಹ ಕಾಣಿಸಿಕೊಂಡಿದ್ದಾರೆ. ಸಿಲ್ಕ್ ಮಂಜು ಹಣ ಹೂಡಿಕೆ ಮಾಡಿದ್ದಾರೆ. ವಿನಾಯಕ ಕೋಡ್ಸರ ನಿರ್ದೇಶನ ಮಾಡಿದ್ದು, ಉಪ್ಪಿ ಎಂಟರ್ ಟೈನರ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗ್ತಿದೆ.




Leave a Reply

Your email address will not be published. Required fields are marked *

error: Content is protected !!