10 ಸಾವಿರ ಜನರನ್ನ ಬಲಿ ಪಡೆದ ಅಂಫನ್ ಚಂಡಮಾರುತ ಕರುನಾಡಲ್ಲಿ ಅನಾಹುತ ಸೃಷ್ಟಿಸುತ್ತಾ?

340

ಬೆಂಗಳೂರು: ಕರೋನಾ ಅಟ್ಟಹಾಸದ ನಡುವೆ ಇದೀಗ ದೇಶದಲ್ಲಿ ಅಂಫನ್ ಚಂಡಮಾರುತದ ಭಯ ಸೃಷ್ಟಿಯಾಗಿದೆ. ಗಂಟೆಗೆ 190 ಕಿಲೋ ಮೀಟರ್ ವೇಗದಲ್ಲಿ ಬೀಸುವ ಅಂಫನ್ ಚಂಡಮಾರುತ, ಇಂದು ಮಧ್ಯಾಹ್ನ ಬಂಗಾಳದ ಕರಾವಳಿಗೆ ಅಪ್ಪಳಿಸಿದೆ. ಹೀಗಿರುವಾಗ ಒಡಿಶಾ ಸೇರಿದಂತೆ ಇತರೆಡೆ ಈಗ್ಲೇ ಅಬ್ಬರ ಮಳೆ ಶುರುವಾಗಿದೆ.

ಒಡಿಶಾದ ಭದ್ರಕ್, ಬಾಲಾಸೋರ್, ಚಂಡೀಪುರ್, ಪಾರಾದೀಪ್ ಸೇರಿದಂತೆ ಹಲವು ಕಡೆ ನಸುಕಿನಜಾವ 4ಗಂಟೆಯಿಂದಲೇ ಮಳೆಯ ಆರ್ಭಟ ಶುರುವಾಗಿದೆ. ಇದರ ಜೊತೆಗೆ ಗಾಳಿಯೂ ಸಹ ಜೋರಾಗಿದೆ. ಕರಾವಳಿ ಭಾಗದಲ್ಲಿ ಸಮದ್ರದ ಅಲೆಗಳು -5 ಮೀಟರ್ ಎತ್ತರದಲ್ಲಿ ಏಳಲಿದ್ದು, ಕೆಲವು ಕಡೆ ಸಮುದ್ರದ ನೀರು ಮೇಲೇರಿ ಹರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಂಫನ್ ಚಂಡಮಾರುತ:

ಗಂಟೆಗೆ 190 ರಿಂದ 200 ಕಿಲೋ ಮೀಟರ್ ವೇಗದಲ್ಲಿ ಬೀಸುವ ಚಂಡಮಾರುತ, 155 ರಿಂದ 165 ಕಿಲೋ ಮೀಟರ್ ವೇಗದಲ್ಲಿ ಬಂಗಾಳ, ಒಡಿಶಾ ಕಾರವಳಿಗೆ ಅಪ್ಪಳಿಸುವ ಸಾಧ್ಯತೆಗಳಿವೆ. ಹೀಗಾಗಿಯೇ ಬಂಗಾಳದಲ್ಲಿ 3 ಲಕ್ಷ ಜನರನ್ನ ಸ್ಥಳಾಂತರ ಮಾಡಲಾಗಿದೆ. ಒಡಿಶಾದಲ್ಲಿ 11 ಲಕ್ಷ ಜನರನ್ನ ಸ್ಥಳಾಂತರ ಮಾಡಲಾಗ್ತಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ ಶಾ ಸೇರಿದಂತೆ ರಾಜ್ಯಗಳ ಮುಖ್ಯಮಂತ್ರಿಗಳು ಮುಂಜಾಗ್ರತ ಕ್ರಮಗಳನ್ನ ತೆಗೆದುಕೊಂಡಿದ್ದು, ರಾಷ್ಟ್ರೀಯ ವಿಪತ್ತ ತಂಡನವನ್ನ ಕಳುಹಿಸಲಾಗಿದೆ.

ಒಡಿಶಾದಲ್ಲಿ 10 ಸಾವಿರ ಜನರ ಸಾವು:

ಈ ಸೂಪರ್ ಸೈಕ್ಲೋನ್ 1999ರಲ್ಲಿ ಒಡಿಶಾದಲ್ಲಿ ಮರಣಮೃದಂಗ ಭಾರಿಸಿತ್ತು. ಅಂದು ಬೀಸಿದ್ದ ಅಂಫನ್ ಚಂಡಮಾರುತ ಬರೋಬ್ಬರಿ 10 ಸಾವಿರ ಜನರನ್ನ ಬಲಿ ಪಡೆದಿತ್ತು. ಇಂಥಾ ರಣಭೀಕರ ಚಂಡಮಾರುತ ಇಂದು ಮಧ್ಯಾಹ್ನ ಮತ್ತೆ ತನ್ನಾಟ ನಡೆಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಇದು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಕರೋನಾ ಆಪತ್ತು ಕಾಲದ ಟೈಂನಲ್ಲಿ ಅಂಫನ್ ಚಂಡಮಾರುತ ರಾಜ್ಯದಲ್ಲಿ ಯಾವ ಅನಾಹುತ ಸೃಷ್ಟಿಸುತ್ತೆ ಅನ್ನೋ ಭಯ ಜನರಲ್ಲಿ ಮೂಡಿದೆ. ಕರಾವಳಿ ಭಾಗದ ಜನರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಇದರ ಪ್ರಭಾವ ಹೇಗೆ ಇರಲಿದೆ ಅನ್ನೋ ಆತಂಕ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!