ಗೋಬಿ, ಕಬಾಬ್, ಪಾನಿಪುರಿಗೆ ಕೃತಕ ಬಣ್ಣ ನಿಷೇಧ

77

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಗೋಬಿ ಮಂಚೂರಿ, ಕಬಾಬ್, ಪಾನಿಪುರಿ, ಕಾಟನ್ ಕ್ಯಾಂಡಿಗೆ ಬಳಸುವ ಕೃತಕ ಬಣ್ಣ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ರೋಡ್ ಮೈನ್, ಬಿಯನ್ ಬಳಸಲಾಗುತ್ತಿದೆ. ಇದರಿಂದ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಅಂಶಗಳಿವೆ ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಇದು ತಳ್ಳು ಗಾಡಿಯಿಂದ ಸ್ಟಾರ್ ಹೋಟೆಲ್ ವರೆಗೂ ಅನ್ವಯಿಸುತ್ತದೆ. ಇದನ್ನು ಉಲ್ಲಂಘಿಸಿದ್ರೆ ದಂಡ ಹಾಗೂ ಜೈಲು ವಾಸ ಶಿಕ್ಷೆ ಎಂದು ಹೇಳಿದ್ದಾರೆ.

ರೋಡಮೈನ್ ಬಿ ತುಂಬಾ ಅಪಾಯಕಾರಿ. ಇದರ ಬಳಕೆಯಿಂದ ದಟ್ಟ ಗುಲಾಬಿ ಅಥವ ಇತರೆ ಬಣ್ಣಕ್ಕೆ ತಿರುಗುತ್ತದೆ. ಇದು ಮೂತ್ರಪಿಂಡ, ಮಿದುಳು, ಹೃದಯಕ್ಕೆ ಹಾನಿ ಮಾಡುತ್ತದೆ. ಹೀಗಾಗಿ ಇದನ್ನು ಬಳಸಲು ಅನುಮತಿ ಇಲ್ಲ. ಇದನ್ನು ಮೀರಿ ಬಳಸಿರುವುದು ಗೊತ್ತಾಗದರೆ 7 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ದಂಡ ವಿಧಿಸಲಾಗುತ್ತೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!