ಆ.3ರಂದು ಅಟಲ್ ಸುರಂಗ ಮಾರ್ಗ ಉದ್ಘಾಟನೆ

357

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಹಸರಿನಲ್ಲಿ ನಿರ್ಮಾಣವಾದ ಅಟಲ್ ಸುರಂಗ ಮಾರ್ಗಕ್ಕೆ ಅಕ್ಟೋಬರ್ 3ರಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಹಿಮಾಚಲ ಪ್ರದೇಶದ ಲೇಹ್ ಹಾಗೂ ಮನಾಲಿ ನಡುವಿನ ಸಂರ್ಪಕದ ಸುರಂಗ ಉದ್ಘಾಟಿಸಲಿದ್ದಾರೆ.

ಈ ಮಾರ್ಗದಲ್ಲಿ ಹಿಮಪಾತವಾಗುವುದ್ರಿಂದ ವರ್ಷದಲ್ಲಿ ಆರು ತಿಂಗಳು ನಿರ್ಬಂಧ ಹೇರಲಾಗ್ತಿತ್ತು. ಇದೀಗ ಸುರಂಗ ನಿರ್ಮಾಣವಾಗಿರುವುದ್ರಿಂದ ವರ್ಷಪೂರ್ತಿ ಸಂಚರಿಸಬಹುದು. 9.2 ಕಿಲೋ ಮೀಟರ್ ಉದ್ದದ ಸುರಂಗ, ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗವಾಗಿದೆ. ಇದ್ರಿಂದಾಗಿ ಲೇಹ್-ಮನಾಲಿ ನಡುವಿನ 46 ಕಿಲೋ ಮೀಟರ್ ಅಂತರ ಕಡಿತಗೊಂಡಿದೆ.

ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ಇದನ್ನು ನಿರ್ಮಿಸಲಾಗಿದೆ. 6 ವರ್ಷಗಳಲ್ಲಿ ಇದರ ಕಾಮಗಾರಿ ಮುಗಿಯಬೇಕಿತ್ತು. ಆದ್ರೆ, ಇದು 10 ವರ್ಷ ತೆಗೆದುಕೊಂಡಿದ್ದು, ಅಕ್ಟೋಬರ್ 3ರಂದು ಸಂಚಾರ ಮುಕ್ತವಾಗಲಿದೆ.




Leave a Reply

Your email address will not be published. Required fields are marked *

error: Content is protected !!