ಜಿಮ್ಸ್ ನಲ್ಲಿ ಕೋವಿಡ್ ಸೋಂಕಿತ ಯುವತಿಯ ಬಲತ್ಕಾರಕ್ಕೆ ಯತ್ನ

277

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಮಂಗಳವಾರ ತಡರಾತ್ರಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಯುವತಿಯ ಮೇಲೆ ಬಲತ್ಕಾರಕ್ಕೆ ಯತ್ನಿಸಲಾಗಿದೆ. 25 ವರ್ಷದ ಯುವತಿ ಮೇಲೆ ಖಾಸಗಿ ಆಂಬ್ಯುಲೆನ್ಸ್ ಚಾಲಕ ಪಿಂಟು ಎಂಬಾತ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದು ಬಂದಿದೆ.

ಜಿಮ್ಸ್ ನ ಜಯದೇವ ಹೃದ್ರೋಗ ಕೇಂದ್ರದ ರೂಮ್ ನಂಬರ್ 429ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೇಲೆ ನಡುರಾತ್ರಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಗಾಢ ನಿದ್ರೆಯಲ್ಲಿದ್ದ ಯುವತಿ ಎಚ್ಚರಗೊಂಡು ಚೀರಿಕೊಂಡಾಗ ಆರೋಪಿ ಓಡಿ ಹೋಗಿದ್ದಾನೆ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆರೋಪಿ ಪಿಂಟುನನ್ನ ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!