ಪಾಂಡೆ-ಜಡೇಜಾ ಆಟಕ್ಕೆ ಸಿಕ್ಕ ಗೆಲುವು

258

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 13 ರನ್ ಗಳ ಅಂತರದಿಂದ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಬೇಕು ಎಂದುಕೊಂಡಿದ್ದ ಆಸೀಸ್ ಪಡೆ ಆಸೆಗೆ ತಣ್ಣೀರು ಎರೆಚಿದಂತಾಗಿದೆ. ಭಾರತ ನೀಡಿದ 303 ರನ್ ಗಳ ಟಾರ್ಗೆಟ್ ಮುಟ್ಟುವಲ್ಲಿ ಯಡವಿದ ಪಿಂಚ್ ಪಡೆ 289 ರನ್ ಗಳಿಗೆ ಆಲೌಟ್ ಆಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಧವನ್ 16, ಗಿಲ್ 33, ಕೊಹ್ಲಿ 63, ಅಯ್ಯರ 19, ಕೆ.ಎಲ್ ರಾಹುಲ 5 ರನ್ ಗಳಿಸಿದ್ರು. ಆಗ ಭಾರತ 152ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಸ್ಫೋಟಕ ಬ್ಯಾಟ್ಸ್ ಮನ್ ಹಾರ್ದಿಕ ಪಾಂಡೆ, ಆಲ್ ರೌಂಡರ್ ರವೀಂದ್ರ ಜಡೇಜಾ ಭರ್ಜರಿ ಬ್ಯಾಟ್ ಬೀಸಿದ್ರು.

ಹಾರ್ದಿಕ್ ಪಾಂಡೆ 92, ಜಡೇಜಾ 66 ರನ್ ಗಳನ್ನ ಬಾರಿಸಿ ನೌಟ್ ಔಟ್ ಉಳಿವುದರೊಂದಿಗೆ 300 ರನ್ ಗಳ ಗಡಿ ದಾಟಿಸಿದ್ರು. ಆಸೀಸ್ ಪರ ಅಗ್ರ್ 2, ಹಝಲ್ ವುಡ್, ಅಬೌಟ್, ಜಂಪಾ ತಲಾ 1 ವಿಕೆಟ್ ಪಡೆದ್ರು.

303 ರನ್ ಗಳ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ಮಾರನ್ಸ್ 7, ಸ್ಮಿತ್ 7 ರನ್ ಗಳಿಸಿ ಬೇಗನೆ ಔಟ್ ಆದ್ರು. ಕ್ಯಾಪ್ಟನ್ ಪಿಂಚ್ ಭರ್ಜರಿ 75 ರನ್ ಗಳಿಸಿದ್ರು. ಹೆನ್ರಿಕ್ಸ್ 22, ಗ್ರೀನ್ 21, ಅಲೆಕ್ಸ್ ಕ್ಯಾರಿ 38 ರನ್ ಗಳಿಸಿ ಔಟ್ ಆದ್ರು. ಇತ್ತ ಭರ್ಜರಿ ಆಟವಾಡ್ತಿದ್ದ ಮ್ಯಾಕ್ಸ್ ವೆಲ್ ತಂಡವನ್ನ ಗೆಲುವಿನತ್ತ ತೆಗೆದುಕೊಂಡು ಹೊರಟಿದ್ರು. 4 ಸಿಕ್ಸ್, 3 ಫೋರ್ ನೊಂದಿಗೆ 38 ಬೌಲ್ ಗಳಲ್ಲಿ 59 ರನ್ ಗಳಿಸಿದಾಗ ಬೂಮ್ರಾ ಬೋಲ್ಡ್ ಮಾಡಿದ. ಅಗ್ರ್ 28, ಅಬೌಟ್ 4, ಜಂಪಾ 4 ರನ್ ಗಳಿಸಿ ಔಟ್ ಆದ್ರು. ಅಲ್ಲಿಗೆ 49.3 ಓವರ್ ಗಳಿಗೆ 289 ರನ್ ಗಳಿಗೆ ಆಲೌಟ್ ಆಯ್ತು.

ಇಂಡಿಯಾ ಪರ ಠಾಕೂರ್ 3, ಬೂಮ್ರಾ 2, ನಟರಾಜನ್ 2, ಯಾದವ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದ್ರು. ಅಂತಿಮವಾಗಿ ಆಸ್ಟ್ರೇಲಿಯಾ 2-1 ಅಂತರದೊಂದಿಗೆ ಸರಣಿ ವಶ ಪಡಿಸಿಕೊಂಡಿತು.




Leave a Reply

Your email address will not be published. Required fields are marked *

error: Content is protected !!