ಭಗತ್ ಸಿಂಗ್ ಗಲ್ಲಿಗೇರಿಸುವ ನಟನೆ ಮಾಡುತ್ತಿದ್ದ ಬಾಲಕ ಸಾವು!

294

ಪ್ರಜಾಸ್ತ್ರ ಸುದ್ದಿ

ಬದೌನ್: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಗೆ ಸಂಬಂಧಿಸಿದ ನಾಟಕ ಮಾಡುತ್ತಿದ್ದ ಸಂದರ್ಭದಲ್ಲಿ ಅನಾಹುತವೊಂದು ನಡೆದಿದೆ. ಭಗತ್ ಸಿಂಗ್ ಅವರನ್ನ ಗೆಲ್ಲಿಗೇರಿಸುವ ದೃಶ್ಯವನ್ನ ಮಾಡುತ್ತಿದ್ದ 10 ವರ್ಷದ ಬಾಲಕ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬದೌನ್ ನ ಬಾಬತ್ ಗ್ರಾಮದಲ್ಲಿ ನಡೆದಿದೆ.

ಭೂರೆ ಸಿಂಗ್ ಅವರ ಮಗ 10 ವರ್ಷದ ಶಿವಂ ಮೃತ ದುರ್ದೈವಿ. ಇತರೆ ಮಕ್ಕಳೊಂದಿಗೆ ನಾಟಕದ ತಯಾರಿ ನಡೆಸ್ತಿದ್ದಾಗ ಗಲ್ಲಿಗೇರಿಸುವ ದೃಶ್ಯ ಮಾಡುವಾಗ ನಿಂತಿದ್ದ ಸ್ಟೂಲ್ ಜಾರಿಬಿದ್ದಾಗ ಕುಣಿಗೆ ಕುತ್ತಿಗೆಗೆ ಬಿಗಿದು ಬಾಲಕ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ. ಆದ್ರೆ, ಈ ಬಗ್ಗೆ ಪೊಲೀಸ್ ಠಾಣೆಗೂ ತಿಳಿಸದೆ ಪೋಷಕರು ಅಂತ್ಯಸಂಸ್ಕಾರ ನಡೆಸಿರುವುದು ತಿಳಿದು ಬಂದಿದೆ.

ಈ ಅನಾಹುತ ಶುಕ್ರವಾರ ನಡೆದಿದೆ. ಘಟನೆ ಮಾಹಿತಿ ಸಿಕ್ಕಿದ್ರಿಂದ ಕುನರಗಾಂವ್ ಠಾಣೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪೋಷಕರನ್ನ ವಿಚಾರಿಸಿದ್ರೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ಹೇಳಲಾಗ್ತಿದೆ. ಪ್ರಕರಣದ ತನಿಖೆ ನಡೆಸಲಾಗ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!