ಸಚಿವರ ಪುತ್ರನ ಬ್ಲಾಕ್ ಮೇಲ್ ಪ್ರಕರಣದಲ್ಲಿ ಇಂಡಿ ಶಾಸಕರ ಪುತ್ರಿ ಫೋನ್ ನಂಬರ್ ತಳಕು!

672

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಶಾಸಕ ಎಸ್.ಟಿ ಸೋಮಶೇಖರ್ ಅವರ ಪುತ್ರನ ಅಶ್ಲೀಲ ವಿಡಿಯೋ ವಿಚಾರಕ್ಕೆ ಸಂಬಂದಿಸಿದಂತೆ ಇದೀಗ ದೊಡ್ಡ ಮಟ್ಟದ ವಿವಾದ ಶುರುವಾಗಿದೆ. ಇದರಲ್ಲಿ ಖಾಸಗಿ ಚಾನೆಲ್ ವೊಂದರ ಮುಖ್ಯಸ್ಥ ಹಾಗೂ ಅವರ ಬಂಡವಾಳ ಹೂಡಿಕೆ ಮಾಡಿದ ವ್ಯಕ್ತಿಯ ಹೆಸರು ಕೇಳಿ ಬಂದಿದೆ. ಇದರ ಜೊತೆಗೆ ಇಂಡಿ ಶಾಸಕ ಪುತ್ರಿಯ ಫೋನ್ ನಂಬರ್ ತಳಕು ಹಾಕಿಕೊಂಡಿದೆ.

ಇಂಡಿ ಶಾಸಕ ಯಶವಂತ್ ರಾವ್ ಪಾಟೀಲ್ ಅವರ ಪುತ್ರಿಯ ಫೋನ್ ನಂಬರ್ ಇಲ್ಲಿ ತಳಕು ಹಾಕಿಕೊಂಡಿದೆ. ಹೀಗಾಗಿ ಸಿಸಿಬಿ ಪೊಲೀಸರು ಶಾಸಕರ ಮನೆಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಾಸಕ, ಇದರಲ್ಲಿ ನನ್ನ ಕುಟುಂಬವನ್ನು ಯಾಕೆ ತೆಗೆದುಕೊಂಡರು ಗೊತ್ತಿಲ್ಲ. ನನ್ನ ಮಗಳ ಮೊಬೈಲ್ ನಂಬರ್ ತೆಗೆದುಕೊಂಡು ಈ ರೀತಿ ಮಾಡುವುದು ಎಷ್ಟು ಸರಿ ಎಂದು ಕೇಳುತ್ತಿದ್ದಾರೆ. ಹೀಗಾಗಿ ಇದರ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದಿದ್ದಾರೆ.

ನನ್ನ ಮಗಳು ವಿದೇಶದಲ್ಲಿ ಓದುತ್ತಿದ್ದಾಳೆ. ಆಕೆಯ ಸ್ನೇಹಿತ ಕೇಳಿದ ಎಂದು ಫೋನ್ ನಂಬರ್ ಗೆ ಬಂದ ಒಟಿಪಿ ಹೇಳಿದ್ದು, ಇದರ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!