ಸಾಸಾಬಾಳ-ಯಂಕಂಚಿ ಬಳಿ ಬಸ್ ಟೈಯರ್ ಬ್ಲಾಸ್ಟ್

543

ಸಿಂದಗಿ: ಸರ್ಕಾರಿ ಬಸ್ಸಿನ ಟೈಯರ್ ಬ್ಲಾಸ್ಟ್ ಆಗಿ ಆತಂಕದ ಸ್ಥಿತಿ ನಿರ್ಮಾಣವಾದ ಘಟನೆ ಸಾಸಾಬಾಳ-ಯಂಕಂಚಿ ರಸ್ತೆ ನಡುವೆ ನಡೆದಿದೆ. ಇದ್ರಿಂದಾಗಿ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಾಕಷ್ಟು ಭಯವಾಗಿತ್ತು.

ಸಿಂದಗಿ ಚಟ್ನಳ್ಳಿಯ ಬಸ್ ಇಂದು ಬೆಳಗ್ಗೆ ಬರುವಾಗಿ ಈ ಒಂದು ಅನಾಹುತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಏನೂ ತೊಂದ್ರೆಯಾಗಿಲ್ಲ. ಈ ಘಟನೆಯಿಂದಾಗಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತೊಂದು ಬಸ್ ಗಾಗಿ ಪರದಾಡಿದ್ರು.

ಓದುಗರ ಗಮನಕ್ಕೆ

ಈ ಮಾರ್ಗ ಮಧ್ಯ ಸಂಚರಿಸುವ ಬಸ್ ಅತ್ಯಂತ ಹಳೆಯದಾಗಿದ್ದು, ಅವುಗಳ ಚಕ್ರಗಳನ್ನ ನೋಡಿದ್ರೆ ಗೊತ್ತಾಗುತ್ತೆ ಬಸ್ ಯಾವ ಸ್ಥಿತಿಯಲ್ಲಿದೆ ಅನ್ನೋದು ಅಂತಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ರು. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ರೂ ಎಷ್ಟೊಂದು ಅನಾಹುತವಾಗ್ತಿತ್ತು. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಬೇಕು. ಗುಜರಿಗೆ ಹಾಕುವ ಬಸ್ ಗಳ ಸಂಚಾರ ಮೊದ್ಲು ನಿಲ್ಲಿಸಬೇಕೆಂದು ಹೇಳಿದ್ರು.




One thought on “ಸಾಸಾಬಾಳ-ಯಂಕಂಚಿ ಬಳಿ ಬಸ್ ಟೈಯರ್ ಬ್ಲಾಸ್ಟ್

Leave a Reply

Your email address will not be published. Required fields are marked *

error: Content is protected !!