ಅನರ್ಹ ಶಾಸಕರಿಗೆ ಟೆನ್ಷನ್.. ಸೆ 23ಕ್ಕೆ ಭವಿಷ್ಯ.. ಬಿಜೆಪಿ ನಡೆ ಏನು?

365

ಬೆಂಗಳೂರು: ರಾಜ್ಯದ 15 ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವ ದಿನಾಂಕವನ್ನ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಅಕ್ಟೋಬರ್ 21ಕ್ಕೆ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ ಅಂತಾ ಚುನಾವಣಾ ಆಯೋಗದ ಆಯುಕ್ತ ಸುನೀಲ ಅರೋರಾ ತಿಳಿಸಿದ್ದಾರೆ. ಹೀಗಾಗಿ ಅನರ್ಹ ಶಾಸಕರಿಗೆ ಟೆನ್ಷನ್ ಶುರುವಾಗಿದೆ.

ಸೆಪ್ಟೆಂಬರ್ 23ರಿಂದ ನಾಮಪತ್ರ ಸಲ್ಲಿಕೆ ಶುರು, ಸೆಪ್ಟೆಂಬರ್ 30ಕ್ಕೆ ಕೊನೆಯ ದಿನ. ಅಕ್ಟೋಬರ್ 1 ನಾಮಪತ್ರ ಪರಿಶೀಲನೆ, ಅಕ್ಟೋಬರ್ 21ಕ್ಕೆ ಎಲೆಕ್ಷನ್, 24ಕ್ಕೆ ಫಲಿತಾಂಶ ಘೋಷಣೆ ಆಗಲಿದೆ. ಅನರ್ಹ ಶಾಸಕರು, ಅನರ್ಹತೆಯನ್ನ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿದೆ. ಅದರ ವಿಚಾರಣೆ ಸೆಪ್ಟೆಂಬರ್ 23, ಸೋಮವಾರ ನಡೆಯಲಿದೆ.

ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಎಂಟಿಬಿ ನಾಗರಾಜ, ಬಿ.ಸಿ ಪಾಟೀಲ, ಮುನಿರತ್ನ, ಶಿವರಾಂ ಹೆಬ್ಬಾರ, ಎಸ್.ಟಿ ಸೋಮಶೇಖರ, ಗೋಪಾಲಯ್ಯ, ಬೈರತಿ ಬಸವರಾಜ, ಹೆಚ್.ವಿಶ್ವನಾಥ ಸೇರಿದಂತೆ 15 ಶಾಸಕರಿಗೆ ಇದೀಗ ಟೆನ್ಷನ್ ಶುರುವಾಗಿದೆ. ಸ್ಪೀಕರ್ ಅನರ್ಹತೆಯನ್ನ ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಿತು ಅಂದ್ರೆ ಅಲ್ಲಿಗೆ ಅವರ ಕಥೆ ಮುಗಿಯಿತು. ಒಂದು ವೇಳೆ ಅವರ ರಾಜೀನಾಮೆ ಅಂಗೀಕಾರ ಮಾಡಬೇಕು ಅನ್ನೋ ತೀರ್ಪು ಏನಾದ್ರೂ ಬಂದ್ರೆ ಉಪ ಚುನಾವಣೆ ಕದನ ಇನ್ನೂ ಜೋರಾಗಿ ಇರಲಿದೆ.

ಇದರ ನಡುವೆ ಬಿಜೆಪಿಗೂ ಇದು ಟೆನ್ಷನ್ ಕೊಡ್ತಿದೆ. ಸೋಮವಾರದಿಂದ ನಾಮಪತ್ರ ಸಲ್ಲಿಕೆ ಶುರುವಾಗಲಿದೆ. ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿ ಯಾರಿಗೆ ನಿಲ್ಲಿಸುತ್ತೆ. ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಬರಲು ಕಾರಣವಾದವರ ಬೆನ್ನಿಗೆ ಇವರು ಹೇಗೆ ನಿಂತುಕೊಳ್ಳುತ್ತಾರೆ ಅನ್ನೋ ಕುತೂಹಲವಿದೆ. ಉಪ ಚುನಾವಣೆ ದಿನಾಂಕ ಘೋಷಣೆಯಾಗಿರುವುದ್ರಿಂದ ಬಿಜೆಪಿ ನಡೆ ಸಹ ರಾಜ್ಯದ ಜನರ ಕುತೂಹಲ ಹೆಚ್ಚಿಸಿದೆ. ಇದು ಸಪೋರ್ಟ್ ನೀಡಿದ ಅನರ್ಹ ಶಾಸಕರಿಗೆ ಬಿಜೆಪಿ ಯಾವ ರೀತಿ ಉಪಕಾರ ಮಾಡುತ್ತೆ ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!