ಎಲ್ಲೆಲ್ಲಿ ಯಾರ್ಯಾರು ನಾಮಪತ್ರ ಸಲ್ಲಿಸಿದ್ರು ಗೊತ್ತಾ?

460

ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆಯ ಕಾವು ಜೋರಾಗಿದೆ. ಅನರ್ಹ ಶಾಸಕರು ಬಿಜೆಪಿಯಿಂದ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಸಹ ಇಂದು ಭರ್ಜರಿಯಾಗಿ ನಾಮಪತ್ರ ಸಲ್ಲಿಸಿದ್ರು. ಯಾರು ಯಾವ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ರು ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಬೆಳಗಾವಿಯ ಗೋಕಾಕನಿಂದ ರಮೇಶ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ರು. ಕಾಂಗ್ರೆಸ್ ನಿಂದ ಲಖನ ಜಾರಕಿಹೊಳಿ ಟಿಕೆಟ್ ಕನ್ಫರ್ಮ್ ಇದೆ. ಇದರ ನಡುವೆ ಸತೀಶ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ಕಾಗವಾಡದಿಂದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ,

ಯಶವಂತಪುರದಿಂದ ಬಿಜೆಪಿಯಿಂದ ಎಸ್.ಟಿ ಸೋಮಶೇಖರ, ಕಾಂಗ್ರೆಸ್ ನಿಂದ ಪಾಳ್ಯ ನಾಗರಾಜ, ಜೆಡಿಎಸ್ ನಿಂದ ಜವರಾಯಿಗೌಡ ನಾಮಪತ್ರ ಸಲ್ಲಿಸಿದ್ರು. ಹುಣಸೂರಿನಲ್ಲಿ ಕಾಂಗ್ರೆಸ್ ನಿಂದ ಹೆಚ್.ಪಿ ಮಂಜುನಾಥ, ಬಿಜೆಪಿಯಿಂದ ಹೆಚ್.ವಿಶ್ವನಾಥ ಹಾಗೂ ಜೆಡಿಎಸ್ ನಿಂದ ಸೋಮಶೇಖರ ನಾಮಪತ್ರ ಸಲ್ಲಿಸಿದ್ರು.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ನಿಂದ ಎಂ.ಆಂಜಿನಪ್ಪ, ಬಿಜೆಪಿಯಿಂದ ಡಾ.ಕೆ ಸುಧಾಕರ ಮತ್ತು ಜೆಡಿಎಸ್ ನಿಂದ ಕೆ.ಪಿ ಬಚ್ಚೇಗೌಡ ಕಣಕ್ಕೆ ಇಳಿದಿದ್ದಾರೆ. ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ನಾರಾಯಣಗೌಡ, ಕಾಂಗ್ರೆಸ್ ನಿಂದ ಕೆ.ಬಿ ಚಂದ್ರಶೇಖರ, ಜೆಡಿಎಸ್ ನಿಂದ ಬಿ.ಎಲ್ ದೇವರಾಜ ಅದೃಷ್ಟ ಪರೀಕ್ಷೆಗೆ ಅಧಿಕೃತವಾಗಿ ಸಜ್ಜಾಗಿದ್ದಾರೆ. ಕೆ.ಆರ್ ಪುರಂನಲ್ಲಿ ಬಿಜೆಪಿಯಿಂದ ಬೈರತಿ ಬಸವರಾಜ,

ಶಿವಾಜಿನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಿಜ್ವಾನ ಅರ್ಷದ, ಜೆಡಿಎಸ್ ನಿಂದ ತನ್ವೀರ ಅಹ್ಮದ ಹಾಗೂ ಬಿಜೆಪಿಯಿಂದ ಸರವಣ ನಾಮಪತ್ರ ಸಲ್ಲಿಸಿದ್ರು. ಹೊಸಕೋಟೆಯಲ್ಲಿ ಬಿಜೆಪಿಯಿಂದ ಎಂಟಿಬಿ ನಾಗರಾಜ, ಬಿಜೆಪಿ ಬಂಡಾಯ ಅಭ್ಯರ್ಥಿ ಶರತ ಬಚ್ಚೇಗೌಡ ಸ್ಪರ್ಧಿಸ್ತಿದ್ದಾರೆ. ಹೀಗಾಗಿ ಅವರನ್ನ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ಕುರಿತು ಸಿಎಂ ಬಿಎಸ್ವೈ ಹೇಳಿದ್ದಾರೆ.

ಹೀಗೆ ರಾಜ್ಯದ 15 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲಾಗ್ತಿದೆ. ಇನ್ನು ಕೆಲವು ಕಡೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ.

ಗ್ರಾಫಿಕ್ಸ್: ಅಂತರ್ಜಾಲ ಕೃಪೆ




Leave a Reply

Your email address will not be published. Required fields are marked *

error: Content is protected !!