ಬೆಳ್ಳಂಬೆಳಗ್ಗೆ ಕಾರು ಅಪಘಾತ: ಚಾಲಕ ಸಾವು

243

ಪ್ರಜಾಸ್ತ್ರ ಸುದ್ದಿ

ಪುತ್ತೂರು: ರಸ್ತೆ ಡಿವೈಡರ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿದ ಘಟನೆ ಪುತ್ತೂರಿನ ಕೆಮ್ಮಾಯಿಯಲ್ಲಿ ನಡೆದಿದೆ. ಬೆಳ್ತಂಗಡಿಯ ಬಾರ್ಯ ನಿವಾಸಿ ಅರುಣಕುಮಾರ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಮಂಗಳವಾರ ಬೆಳಗ್ಗೆ ಈ ಒಂದು ಘಟನೆ ನಡೆದಿದೆ.

ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದ, ಅವರನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಪುತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!