ಸಿಡಿ ಪ್ರಕರಣ: ವಿಡಿಯೋದಲ್ಲಿನ ಧ್ವನಿ ಸುಳಿವು

257

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ತೀವ್ರ ಕಾರ್ಯಾಚರಣೆ ನಡೆಸ್ತಿದ್ದಾರೆ. ಈಗಾಗ್ಲೇ ಹಲವು ಸಾಕ್ಷಿಗಳನ್ನ, ದಾಖಲೆಗಳನ್ನ ಕಲೆ ಹಾಕಿರುವ ಎಸ್ಐಟಿ ಅಧಿಕಾರಿಗಳು, ಇದೀಗ ವಿಡಿಯೋದಲ್ಲಿನ ಧ್ವನಿ ಬಗ್ಗೆ ಸುಳಿವು ಸಿಕ್ಕಿದೆಯಂತೆ.

ವಿಡಿಯೋದಲ್ಲಿನ ಧ್ವನಿ ಮಾಹಿತಿ ಸಂಗ್ರಹಿಸಿದ್ದು, ಅದು ಚಿಕ್ಕಮಗಳೂರು ಮೂಲದ ವ್ಯಕ್ತಿಯದು ಎಂದು ಹೇಳಲಾಗ್ತಿದೆ. ಧ್ವನಿ ಸ್ಯಾಂಪಲ್ ಎಫ್ಎಸ್ಎಲ್ ಗೆ ಹೋಗಿದ್ದು, ಅಲ್ಲಿಂದ ವರದಿ ಬಂದ್ಮೇಲೆ ಸುಳಿವು ಸಿಕ್ಕಿರುವ ವ್ಯಕ್ತಿಯದ್ದೆ ಧ್ವನಿಯಾಗಿದ್ದರೆ ಆತನ ಬಂಧನವಾಗಲಿದೆ. ಈ ಮೂಲಕ ರಮೇಶ ಜಾರಕಿಹೊಳಿ ಫೇಕ್ ವಿಡಿಯೋ ಎನ್ನುತ್ತಿರುವ ಮಾತಿಗೆ ಪುಷ್ಟಿ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!