ಬಿಜೆಪಿಗೆ ಸಂಕಷ್ಟ ತಂದ ಆರಗ ಜ್ಞಾನೇಂದ್ರ ಹೇಳಿಕೆ

138

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಸ್ತೂರಿ ರಂಗನ್ ವರದಿ ವಿಚಾರವಾಗಿ ನಡೆದ ಪ್ರತಿಭಟನೆಯ ವೇಳೆ ಬಿಜೆಪಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಕಲ್ಯಾಣ ಕರ್ನಾಟಕದ ಜನರ ಬಗ್ಗೆ, ಮಲ್ಲಿಕಾರ್ಜುನ್ ಖರ್ಗೆ, ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ನೀಡಿದ್ದ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಈಗಾಗ್ಲೇ ಆರಾಗ ಜಾನೇಂದ್ರ ವಿರುದ್ಧ ಕಲಬುರಗಿಯಲ್ಲಿ ಎಫ್ಐಆರ್ ದಾಖಲಾಗಿದೆ. ಕಾಂಗ್ರೆಸ್ ನಾಯಕರು ಬಿಜೆಪಿ ಸಂಸ್ಕೃತಿ ಬಗ್ಗೆ ಕಿಡಿ ಕಾರುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅವಮಾನ ಮಾಡಲಾಗಿದೆ. ಹಿಂದುಳಿದ, ದಲಿತ ನಾಯಕನ ವಿರುದ್ಧ ಬಣ್ಣದ ವಿಚಾರಕ್ಕೆ ತಮ್ಮ ಮನು ಮನಸ್ಥಿತಿಯನ್ನು ತೋರಿಸಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅನ್ನೋ ಒತ್ತಾಯ ಹೆಚ್ಚಾಗಿದೆ.

ಆರಗ ಜ್ಞಾನೇಂದ್ರವರ ಶಾಸಕತ್ವ ಅನರ್ಹತೆ ಮಾಡಬೇಕು ಎಂದು ಹೇಳಲಾಗುತ್ತಿದೆ. ಅವರ ಹೇಳಿಕೆ ಖಂಡಿಸಿ ಸ್ಪೀಕರ್ ಹಾಗೂ ನ್ಯಾಯಾಲಯಕ್ಕೆ ದೂರು ನೀಡಲು ಮುಂದಾಗಿದ್ದಾರೆ. ಹೀಗಾಗಿ ಬಿಜೆಪಿ ಸಂಕಷ್ಟವೊಂದು ಶುರುವಾಗಿದೆ. ಉಡುಪಿ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹೆಣೆಯಲು ನೋಡುತ್ತಿದ್ದ ಬಿಜೆಪಿಗೆ ತಮ್ಮದೆ ನಾಯಕ ನೀಡಿದ ಹೇಳಿಕೆ ಎಲ್ಲವೂ ಉಲ್ಟಾ ಮಾಡುತ್ತಿದೆ. ಒಂದು ಕಡೆ ವಿಪಕ್ಷ ನಾಯಕನಿಲ್ಲದೆ ಒದ್ದಾಡುತ್ತಿರುವ ಹೊತ್ತಿನಲ್ಲಿ ಇವರ ಹೇಳಿಕೆಯಿಂದ ಬಿಜೆಪಿಗೆ ಮತ್ತಷ್ಟು ಡ್ಯಾಮೇಜ್ ಆಗುತ್ತಿದೆ. ಈ ಕಾರಣ ಕೇಸರಿ ನಾಯಕರು ಸೈಲೆಂಟ್ ಮೂಡ್ ಗೆ ಹೋಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!