ಕೋವಿಡ್ 2ನೇ ಅಲೆ: ಟಿ-3 ಸೂತ್ರ ಹೇಳಿದ ಪ್ರಧಾನಿ

319

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೋವಿಡ್ 19 2ನೇ ಅಲೆ ಬಗ್ಗೆ ಮಾತ್ನಾಡಿರುವ ಪ್ರಧಾನಿ ಮೋದಿ, ಲಾಕ್ ಡೌನ್ ಹಾಗೂ ಕರ್ಫ್ಯೂ ಅಗತ್ಯವಿಲ್ಲವೆಂದು ಹೇಳಿದ್ದಾರೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಬಳಿಕ ಮಾತ್ನಾಡಿದ ಪ್ರಧಾನಿ, ಕರೋನಾ ತಡೆಗೆ ನಿರ್ಲಕ್ಷ್ಯವಹಿಸಿದ್ರೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತೆ ಎಂದಿದ್ದಾರೆ.

ಕರೋನಾ ಕಂಟ್ರೋಲ್ ಮಾಡುತ್ತಿದ್ದೇವೆ ಅನ್ನೋ ತುಂಬಾ ಖುಷಿಯೂ ಬೇಡ. ಹಾಗಂತ ಹೆದರುವ, ಆತಂಕ ಪಡುವ ಅಗತ್ಯವೂ ಇಲ್ಲ. ಇದಕ್ಕಾಗಿ ಟ್ರೇಸ್, ಟ್ರ್ಯಾಕ್ ಹಾಗೂ ಟ್ರೀಟ್ ಅನ್ನೋ ಟಿ-3 ಸೂತ್ರವನ್ನ ಮೋದಿ ತಿಳಿಸಿದ್ದಾರೆ. ಹಳ್ಳಿಗಳಿಗೆ ಕೋವಿಡ್ ಹರಡದಂತೆ ನೋಡಿಕೊಳ್ಳಿ. ಲಸಿಕೆ ಪಡೆದುಕೊಳ್ಳುವ ಮೂಲಕ ಕೋಟ್ಯಾಂತರು ಜನರು ಗುಣಮುಖರಾಗಿದ್ದು, ಇದೊಂದು ಅಸ್ತ್ರವಾಗಿದೆ. ಆದ್ರೆ, ಆಂಧ್ರ, ತೆಲಂಗಾಣದಲ್ಲಿ ಶೇಕಡ 10ರಷ್ಟು ಲಸಿಕೆ ವ್ಯರ್ಥವಾಗ್ತಿದೆ. ಇದು ಆಗಬಾರದು ಎಂದು ತಿಳಿಸಿದ್ದಾರೆ.

ಆರ್ ಟಿಪಿಎಸ್ ಸಾಮರ್ಥ್ಯ ಹೆಚ್ಚಿಸಬೇಕು. ಸಣ್ಣಪುಟ್ಟ ನಗರಗಳಲ್ಲಿಯೂ ಕೋವಿಡ್ ಟೆಸ್ಟಿಂಗ್ ಸೆಂಟರ್ ಶುರು ಮಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವಿದೇಶಗಳಿಂದ ಬರುತ್ತಿರುವವರ ಬಗ್ಗೆ ಗಮನ ಹರಿಸಬೇಕು. 70 ಜಿಲ್ಲೆಗಳಲ್ಲಿ ಶೇಕಡ 150ರಷ್ಟು ಕೋವಿಡ್ ಇದೆ. ಹಾಗಂತ ಯಾರೂ ಭಯ ಪಡುವ ಅಗತ್ಯವಿಲ್ಲ. ಆದ್ರೆ, ಇದರ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಅಂತಾ ವಿಡಿಯೋ ಕಾನ್ಫ್ ರೆನ್ಸ್ ಮೂಲಕ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!