ಬಿಟೌನ್ ಬ್ಯೂಟಿಗೆ ಕರೋನಾ: ಎಸ್ಕೇಪ್ ಆದ ಸಿಂಗರ್…!

420

ಮುಂಬೈ: ಬಾಲಿವುಡ್ ಅಂಗಳದಲ್ಲಿ ಮೊದಲ ಕರೋನಾ ಸೋಂಕು ದೃಢಪಟ್ಟಿದೆ. ಬಿಟೌನ್ ಖ್ಯಾತ ಗಾಯಕಿ ಕನ್ನಿಕಾ ಕಪೂರ್ ಕರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಮೂಲಕ ಮಹಾಮಾರಿಗೆ ಗುರಿಯಾದ ಮೊದಲ ಸೆಲೆಬ್ರಿಟಿಯಾಗಿದ್ದಾಳೆ.

ಕಳೆದ ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದೆ. ಆಸ್ಪತ್ರೆಗೆ ಹೋದಾಗ ಕರೋನಾ ಸೋಂಕು ಪಾಸಿಟೀವ್ ಬಂದಿದೆ. ಇದೀಗ ನಾನು ಹಾಗೂ ನನ್ನ ಕುಟುಂಬ ಪ್ರತ್ಯೇಕವಾಗಿದ್ದೇವೆ. ವೈದ್ಯಕೀಯ ಸಲಹೆ ಸ್ವೀಕರಿಸ್ತಿದ್ದು, ನನ್ನ ಸಂಪರ್ಕಕ್ಕೆ ಬಂದವರ ಮ್ಯಾಪಿಂಗ್ ಸಹ ನಡೆಯುತ್ತಿದೆ ಅಂತಾ ಟ್ವೀಟ್ ಮೂಲಕ ಕನ್ನಿಕಾ ಕಪೂರ್ ಹೇಳಿದ್ದಾಳೆ. ಆದ್ರೆ, ಕನ್ನಿಕಾ ಎಸ್ಕೇಪ್ ಆಗಿದ್ದಾಳೆ ಎನ್ನಲಾಗ್ತಿದೆ.

ಕನ್ನಿಕಾ ಮಾರ್ಚ್ 15ರಂದು ಲಂಡನ್ ನಿಂದ ಲಕ್ನೋಗೆ ಬಂದಿದ್ದಾಳೆ. ಬಳಿಕ ವಾಶ್ ರೂಮಿನಿಂದ ತಲೆ ಮರೆಸಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಕಳೆದ ಭಾನುವಾರ ಗ್ಯಾಲೆಂಟ್ ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ಆಯೋಜಿಸಿದ್ಳಂತೆ. ಇದರಲ್ಲಿ ಹಿರಿಯ ಅಧಿಕಾರಿಗಳು, ಮುಖಂಡರು ಭಾಗವಹಿಸಿದ್ರಂತೆ. ಕನ್ನಿಕಾಗೆ ಕರೋನಾ ಸೋಂಕು ದೃಢಪಟ್ಟ ಪರಿಣಾಮ ಇದೀಗ ಎಲ್ಲರೂ ಭಯ ಪಡ್ತಿದ್ದಾರೆ. ಅಪಾರ್ಟ್ ಮೆಂಟ್ ಜನ ಜಾಗ ಖಾಲಿ ಮಾಡ್ತಿದ್ದಾರಂತೆ. ಕನ್ನಿಕಾ ಸಂಪರ್ಕದಲ್ಲಿದ್ದ ಎಲ್ಲರನ್ನೂ ಸ್ವಯಂ ಆಗಿ ಆರೋಗ್ಯ ಇಲಾಖೆ ಚೆಕ್ ಮಾಡ್ತಿದೆ.




Leave a Reply

Your email address will not be published. Required fields are marked *

error: Content is protected !!