ದೇಶದಲ್ಲಿಯೂ ಭಾರಿ ಇಳಿಕೆ ಕಂಡ ಕರೋನಾ ಸೋಂಕು ಪ್ರಕರಣ

210

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ಸಹ ದಿನದಿಂದ ದಿನಕ್ಕೆ ಕರೋನಾ ಸೋಂಕಿನ ಪ್ರಕರಣ ಇಳಿಕೆ ಕಾಣುತ್ತಿದೆ. ದಿನಕ್ಕೆ 4 ಲಕ್ಷಕ್ಕೂ ಹೆಚ್ಚು ಸೋಂಕಿತರು ಕಾಣಿಸಿಕೊಳ್ತಿದ್ರು. ಈಗ ಅದು 1 ಲಕ್ಷಕ್ಕೆ ಇಳಿದಿದ್ದು ಜನರಿಗೆ, ಸರ್ಕಾರಕ್ಕೆ ಒಂದಿಷ್ಟು ನೆಮ್ಮದಿ ತಂದಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1 ಲಕ್ಷದ 636 ಹೊಸ ಪ್ರಕರಣಗಳು ದಾಖಲಾಗಿವೆ.

ಭಾರತದಲ್ಲಿ 2,89,ಮ09,975ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. 2,427 ಜನರು ಸಾವನ್ನಪ್ಪಿದ್ದು ಮೃತರ ಸಂಖ್ಯೆ 3.50 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ 25 ದಿನಗಳಿಂದ ಚೇತರಿಕೆ ಪ್ರಮಾಣ ಶಕೇಡ 93.94 ಇದೆ. ಈ ಮೂಲಕ ದೇಶದಲ್ಲಿಯೂ ಸೋಂಕಿನ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗ್ತಿರುವುದು ಒಳ್ಳೆಯ ಬೆಳವಣಿಗೆ.




Leave a Reply

Your email address will not be published. Required fields are marked *

error: Content is protected !!