ಸಿಂದಗಿಯಲ್ಲಿ ಕೋವಿಡ್ ಲಸಿಕೆ ಅಭಿಯಾನ

406

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನಾದ್ಯಂತ ಸೆಪ್ಟೆಂಬರ್ 1ರಂದು ಕೋವಿಡ್ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಹಾಕಲಾಗುತ್ತಿದೆ. ಈ ಬಗ್ಗೆ ಪುರಸಭೆಯಿಂದ ಸಾರ್ವಜನಿಕ ಪ್ರಕಟಣೆ ಸಹ ಹೊರಡಿಸಲಾಗಿದೆ.

ತಾಲೂಕು ಸರ್ಕಾರಿ ಆಸ್ಪತ್ರೆ, ಮದೀನಾ ನಗರ, ಮಗರಬಿ ಗಲ್ಲಿ, ತೆಕ್ಕಿಯಾ ಗಲ್ಲಿ, ಹೆಗ್ಗೇರೇಶ್ವರ ಗಲ್ಲಿ ಸೇರಿದಂತೆ ಪಟ್ಟಣದ ಹಲವು ಕಡೆಗಳಲ್ಲಿ ಲಸಿಕೆ ಕೇಂದ್ರ ಪ್ರಾರಂಭಿಸಿ ಲಸಿಕೆ ನೀಡಲಾಗುತ್ತಿದೆ. ಇನ್ನು ತಾಲೂಕು ಆಸ್ಪತ್ರೆಯಲ್ಲಿ ಅತ್ಯಂತ ಸರಳವಾಗಿ ಲಸಿಕೆ ಅಭಿಯಾನ ಸೇವೆ ಆರಂಭಿಸಲಾಯಿತು.

ಈ ವೇಳೆ ಮುಖ್ಯ ವೈದ್ಯಾಧಿಕಾರಿ ಡಾ.ರಾಮಕೃಷ್ಣ ಇಂಗಳೆ, ಆಯುಷ್ ವೈದ್ಯಾಧಿಕಾರಿ ಡಾ.ಮಹಾಂತೇಶ ಹಿರೇಮಠ, ಹಿರಿಯ ಫಾರ್ಮಸಿ ಅಧಿಕಾರಿ ಶಂಕರ ಮಳ್ಳಿ, ಸಿಬ್ಬಂದಿ ಗೀತಾ ಸಾಸಾಬಾಳ, ಶಿವಲೀಲಾ ಕೋಟಿ, ಬಿಜೆಪಿ  ಪ್ರಮುಖರಾದ ಮುತ್ತು ಶಾಬಾದಿ ಸೇರಿದಂತೆ ಇತರರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!