ದೇಶದಲ್ಲಿ ಮತ್ತಷ್ಟು ಇಳಿಕೆ ಕಂಡ ಸೋಂಕು

216

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆ ಕಾಣುತ್ತಿದೆ. ಹೀಗಾಗಿ ಜನರಿಗೆ ಒಂದಿಷ್ಟು ನೆಮ್ಮದಿ ಎಂದು ಹೇಳಬಹುದು. ಕಳೆದ 24 ಗಂಟೆಯಲ್ಲಿ 1,61,386 ಪ್ರಕರಣಗಳು ದಾಖಲಾಗಿವೆ. 2,81,109 ಜನರು ಚೇತರಿಸಿಕೊಂಡಿದ್ದಾರೆ. ದೇಶ್ಯಾದ್ಯಂತ ಇದುವರೆಗೂ 3,95,11,307 ಜನರು ಚೇತರಿಸಿಕೊಂಡಿದ್ದಾರೆ.

ಇನ್ನು 16,21,603 ಪ್ರಕರಣಗಳು ಸಕ್ರಿಯವಾಗಿವೆ. 1,733 ಜನರು ಕಳೆದ 24 ಗಂಟೆಯಲ್ಲಿ ಮೃತಪಟ್ಟಿದ್ದಾರೆ. ಪಾಸಿಟಿವಿಟಿ ಶೇಕಡ 9.26ರಷ್ಟಿದೆ. 167.29 ಕೋಟಿ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!