ಸಿಡಬ್ಲುಜಿ: ಸೆಮಿಗೆ ಭಾರತ ಎಂಟ್ರಿ

263

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬರ್ಮಿಂಗ್ಹ್ಯಾಮ್: ಕಾಮನವೆಲ್ತ್ 2022 ಟೂರ್ನಿಯಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಬಾರ್ಬಡೋಸ್ ತಂಡವನ್ನು ಸೋಲಿಸಿ ಸೆಮಿಗೆ ಎಂಟ್ರಿ ಪಡೆದಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.

ಜೆಮಿಯಾ ರಾಡ್ರಿಗಸ್ 56, ಶಫಾಲಿ ವರ್ಮಾ 43 ರನ್ ಗಳ ಆಟದಿಂದಾಗಿ 162 ರನ್ ಗಳಿಸಿತು. ನಂತರ ಬ್ಯಾಟಿಂಗ್ ನಡೆಸಿದ ಬಾರ್ಬಡೋಸ್ ಟೀಂಗೆ ರೇಣುಕಾ ಸಿಂಗ್ ಅವರ ಮಾರಕ ಬೌಲಿಂಗ್ ನಿಂದಾಗಿ ಕೇವಲ 62 ರನ್ ಗಳನ್ನು ಗಳಿಸಿ ಸೋಲು ಅನುಭವಿಸಿತು. ಬಾರ್ಬಡೋಸ್ ನ 7 ಬ್ಯಾಟರ್ ಗಳು ಎರಂಡಕಿ ಸಹ ತಲುಪಲಿಲ್ಲ.

ಕೌರ್, ಸ್ನೇಹ ರಾಣಾ, ಮೇಘನಾ ಸಿಂಗ್ ಮತ್ತು ರಾಧಾ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು. ಪಾಕ್ ವಿರುದ್ಧ ಗೆಲುವು ಸಾಧಿಸಿದ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು.




Leave a Reply

Your email address will not be published. Required fields are marked *

error: Content is protected !!