ಡೆಡ್ಲಿ ಕರೋನಾಗೆ ದೇಶದಲ್ಲಿ ಒಂದೇ ದಿನ ಮೂವರ ಸಾವು

392

ನವದೆಹಲಿ: ಕಿಲ್ಲಿಂಗ್ ಕರೋನಾಕ್ಕೆ ದೇಶದಲ್ಲಿ ಇಂದು ಒಂದೇ ದಿನದಲ್ಲಿ ಮೂರು ಜನ ಬಲಿಯಾಗಿದ್ದಾರೆ. ಈ ಮೂಲಕ 7 ಜನ ಭಾರತೀಯರು, ಓರ್ವ ಇಟಲಿ ಪ್ರಜೆ ಸೇರಿ 8 ಜನ ಇದುವರೆಗೂ ಮೃತಪಟ್ಟಿದ್ದಾರೆ.

ಗುಜರಾತನ ಸೂರತ್ ನಲ್ಲಿ  67 ವರ್ಷದ ವ್ಯಕ್ತಿ, ಮುಂಬೈನಲ್ಲಿ 56 ವರ್ಷದ ಮಹಿಳೆ ಹಾಗೂ ಬಿಹಾರದ ಪಾಟ್ನಾ ನಗರದಲ್ಲಿ 38 ವರ್ಷದ ವ್ಯಕ್ತಿಯ ಸಾವಿನ ಮೂಲಕ ಡೆಡ್ಲಿ ಕರೋನಾಗೆ ಒಂದೇ ದಿನ ಮೂವರು ಬಲಿಯಾಗಿದ್ದಾರೆ. ದೇಶದಲ್ಲಿ ಇದುವರೆಗೂ 300ಕ್ಕೂ ಹೆಚ್ಚು ಜನರಿಗೆ ಕರೋನಾ ಸೋಂಕು ಇರುವುದು ಪತ್ತೆಯಾಗಿದೆ. ಓರ್ವ ಇಟಲಿ ಪ್ರಜೆ ಸೇರಿ 8 ಜನ ಸಾವನಪ್ಪಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.




Leave a Reply

Your email address will not be published. Required fields are marked *

error: Content is protected !!