ಕೆಪಿಸಿಸಿ ಅಧ್ಯಕ್ಷ ಡಿಕೆಶಿನಾ ಗುಂಡುರಾವಾ? ‘ಪ್ರಜಾಸ್ತ್ರ’ದಲ್ಲಿ ಎಕ್ಸ್ ಕ್ಲೂಸೀವ್ ಚೆಕ್ ರಹಸ್ಯ!

511

ಬೆಂಗಳೂರು: ವಲಸೆ ಕಾರ್ಮಿಕರು ಅವರವರ ಊರಿಗೆ ತೆರಲು ರಾಜ್ಯ ಸರ್ಕಾರ ಬಸ್ ವ್ಯವಸ್ಥೆ ಮಾಡಿದೆ. ಆದ್ರೆ, ಅದಕ್ಕೆ ಡಬಲ್, ತ್ರಿಬಲ್ ಟಿಕೆಟ್ ರೇಟ್ ಫಿಕ್ಸ್ ಮಾಡಿ ವಸೂಲಿಗೆ ಇಳಿದಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ಭೀಕ್ಷೆ ಬೇಡಿ ಹಣ ಕೊಡುತ್ತೇನೆ. ಕಾರ್ಮಿಕರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿ ಎಂದಿದ್ರು. ಇದೀಗ 1 ಕೋಟಿ ರೂಪಾಯಿಯನ್ನ ಕೆಪಿಸಿಸಿ ಮೂಲಕ ನೀಡಿ ಕಾರ್ಮಿಕರ ಬೆನ್ನಿಗೆ ನಿಂತಿದ್ದಾರೆ.

ಇದೀಗ ಕೆಪಿಸಿಸಿ ವತಿಯಿಂದ 1 ಕೋಟಿ ರೂಪಾಯಿಯನ್ನ ಕೆಎಸ್ಆರ್ ಟಿಸಿಗೆ ನೀಡಲಾಗಿದೆ. ಈ ಬಗ್ಗೆ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರಿಗೆ ಲೆಟರ್ ಹೆಡ್ ನಲ್ಲಿ ಪತ್ರ ಸಹ ಬರೆಯಲಾಗಿದೆ. ಅಲ್ಲಿ ಡಿ.ಕೆ ಶಿವಕುಮಾರ, ಅಧ್ಯಕ್ಷರು ಎಂದು ಇದೆ. ಅದು ಇವತ್ತಿನ ದಿನಾಂಕದಲ್ಲಿದೆ. ಆದ್ರೆ, ಚೆಕ್ ನಲ್ಲಿ ದಿನೇಶ ಗುಂಡುರಾವ, ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಎಂದು ಸೀಲ್ ಮತ್ತು ಸಹಿ ಇದೆ.

ಚೆಕ್ ನಿನ್ನೆ ದಿನಾಂಕದಲ್ಲಿದ್ರೂ ಅದು ಮೂರು ತಿಂಗಳು ಅವಧಿ ಹೊಂದಿರುತ್ತೆ. ಆದ್ರೆ, ಕೆಪಿಸಿಸಿ ಅಧ್ಯಕ್ಷರು ಯಾರು ಅನ್ನೋ ಪ್ರಶ್ನೆ ಮೂಡಿದೆ. ಡಿ.ಕೆ ಶಿವಕುಮಾರ ಅಥವ ದಿನೇಶ ಗುಂಡುರಾವ ಅವರಲ್ಲಿ ಯಾರು ಅಧ್ಯಕ್ಷರು ಅನ್ನೋ ಗೊಂದಲ ಜನರಲ್ಲಿ ಮೂಡಿದೆ. ಅಥವ ಈ ಚೆಕ್ ಫೇಕ್ ಆಗಿದ್ದು, ಯಾರೋ ಕಿಡಿಗೇಡಿಗಳು ಏನಾದ್ರೂ ಈ ರೀತಿ ಮಾಡಿದ್ದಾರಾ? ಗೊತ್ತಿಲ್ಲ. ಕೆಪಿಸಿಸಿ ಲೆಟರ್ ಹೆಡ್ ಪತ್ರ ಹಾಗೂ ಚೆಕ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದು ಇದರ ಸತ್ಯಾಸತ್ಯತೆ ತಿಳಿಯಬೇಕಿದೆ. ಕಿಡಿಗೇಡಿಗಳೇನಾದ್ರೂ ಹೀಗೆ ಮಾಡಿದ್ರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.




Leave a Reply

Your email address will not be published. Required fields are marked *

error: Content is protected !!