ಕೆಎಸ್ಎನ್ ಒಲವಿನ ಕವಿ: ಲೇಖಕಿ ಇಂದಿರಾ ಜಮ್ಮಲದಿನ್ನಿ

300

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಬೆಂಗಳೂರು: ಹಿರಿಯ ಕವಿ ಕೆ.ಎಸ್ ನರಸಿಂಹಸ್ವಾಮಿ ಅವರ ಕಾವ್ಯ ಕ್ರಮಿಸಿದ ರೀತಿ ಅದ್ಭುತವಾಗಿದೆ. ಶಿಸ್ತಿನ ಚೌಕಟ್ಟಿನಲ್ಲಿ ಕವಿತೆಗಳನ್ನ ರಚಿಸಿದ ಇವರು ನಿಜಕ್ಕೂ ಜನಮನದ ಕವಿ, ಒಲವಿನ ಕವಿ, ದಾಂಪತ್ಯದ ಕವಿ ಎಂದು, ಲೇಖಕಿ ಇಂದಿರಾ ಶರಣ ಜಮ್ಮಲದಿನ್ನಿ ಹೇಳಿದ್ದಾರೆ.

ಪ್ರಜಾಸ್ತ್ರ ವೆಬ್ ಪತ್ರಿಕೆ ಆಯೋಜಿಸಿದ್ದ ‘ಇಳಿಸಂಜೆ ಕಾವ್ಯ’ ವೆಬಿನಾರ್ ನಲ್ಲಿ ಕವಿ ಕೆಎಸ್ಎನ್ ಅವರ ‘ತೆರೆದ ಬಾಗಿಲು’ ಕೃತಿಯ ಕುರಿತು, ಲೇಖಕಿ ಇಂದಿರಾ ಶರಣ ಜಮ್ಮಲದಿನ್ನಿ ಮಾತನಾಡುತ್ತಾ ಈ ರೀತಿ ಹೇಳಿದ್ದಾರೆ. 16 ಕವಿತೆಗಳು ಇರುವ ತೆರೆದ ಬಾಗಿಲು ಕೃತಿ, ಸಾವು ಮನುಷ್ಯನನ್ನ ಎಷ್ಟು ಹೆದರಿಸುತ್ತದೆ, ಮೌಢ್ಯ, ದಾಂಪತ್ಯದ ಸರಸ ಸಲ್ಲಾಪ, ವಿರಹ, ಗರ್ಭಣಿಯ ಮನದಲ್ಲಿ ನಡೆಯುವ ಸಂಘರ್ಷ, ಮಕ್ಕಳ ವ್ಯಾಮೋಹ, ನಮ್ಮೊಳಗೆ ಮೂಡುವ ಅನುಮಾನ, ಮಧ್ಯಮ ವರ್ಗದ ಜನರ ಬದುಕು, ಪ್ರತಿಯೊಬ್ಬರ ಮನಸ್ಸಿನಲ್ಲಿ ಮಳೆ ಸೃಷ್ಟಿಸುವ ಭಾವ ಸೇರಿದಂತೆ ಹಲವು ವಿಚಾರಗಳನ್ನ ತುಂಬಾ ಆಪ್ತವಾಗಿ ಬರೆದಿದ್ದಾರೆ ಎಂದಿದ್ದಾರೆ.

ಕುಂಕುಮ ಭೂಮಿ, ತೆರೆದ ಬಾಗಿಲು, ಮುಚ್ಚಿದ ಕಿಟಕಿ, ಅನುಮಾನ, ಮೂರನೇ ಸಲಹೆ, ಭೂತಗನ್ನಡಿ, ಕುಶಲಪ್ರಶ್ನೆ, ಸಂಧ್ಯಾರಾಗ, ಕವನ ಹುಟ್ಟುವ ಸಮಯ, ಪ್ರೇಮ ಪತ್ರ, ಆಶಾಢ, ಋತ ವೈಭವ, ಸಾಕುಮಗ, ರೈಲ್ವೆ ನಿಲ್ದಾಣ, ಇವನು ಹುಟ್ಟಿದ ಹಬ್ಬ, ಆರತಿಯ ಸಂಜೆ ಕವಿತೆಗಳು ತುಂಬಾ ವಿಸ್ತೃತವಾಗಿ ಚರ್ಚಿಸಿದ್ರು.

ಈ ಕಾರ್ಯಕ್ರಮದಲ್ಲಿ ಹಿರಿಯ ಅನುವಾದಕರಾದ ಬಿ.ವಿ ಕೆದಿಲಾಯ, ಮಲರ್ ವಿಳಿ ಕೆ ಹಾಗೂ ಹಣಮಂತರಾಯಪ್ಪ ಹೇಮಾ, ಅನುರಾಧ, ರೋಹಿತ, ಶಂಕರೆಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!