2,300 ಜನರ ಬಲಿ ಪಡೆದ ಪ್ರಬಲ ಭೂಕಂಪನ

192

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಇಸ್ತಾಂಬುಲ್: ಶತಮಾನದ ಬಳಿಕ ಟರ್ಕಿ ಹಾಗೂ ಸಿರಿಯಾದಲ್ಲಿ ಪ್ರಬಲ ಭೂಕಂಪನದಿಂದಾಗಿ ಬರೋಬ್ಬರಿ 2,300 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ಟರ್ಕಿ, ಸಿರಿಯಾದಲ್ಲಿ ಇದೀಗ ಯುದ್ಧದ ಸ್ಥಿತಿ ಕಂಡು ಬರುತ್ತಿದೆ.

7.8 ತೀವ್ರತೆಯ ಭೂಕಂಪನದಿಂದಾಗಿ ಅಪಾರ ಪ್ರಮಾಣದಲ್ಲಿ ಜೀವಹಾನಿ ಜೊತೆಗೆ ಸಾಕಷ್ಟು ಹಾನಿಯಾಗಿದೆ. ಇನ್ನು ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಹೊರ ತೆಗೆಯುವಂತಹ ಕೆಲಸವನ್ನು ರಕ್ಷಣಾ ತಂಡ ನಡೆಸುತ್ತಿದೆ. ಇನ್ನಷ್ಟು ಸಾವು ನೋವುಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಸಿರಿಯಾ ಬಂಡುಕೋರರು ಹಾಗೂ ಸರ್ಕಾರಿ ನಿಯಂತ್ರಿತ ಭಾಗದಲ್ಲಿ 810 ಜನರ ಸಾವು, ಉಳಿದ ಕಡೆ ಸೇರಿದಂತೆ 2,300 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ಮೂರು ಪ್ರಮುಖ ವಿಮಾನ ನಿಲ್ದಾಣ, ಅನೇಕ ಕಡೆ ರಸ್ತೆ ಸಂಚಾರ ಬಂದ್ ಆಗಿದೆ. 1939ರಲ್ಲಿ ಟರ್ಕಿಯ ಪೂರ್ವ ಎರ್ಜಿಂಕನ್ ಪ್ರಾಂತ್ಯದ ಬಳಿ 7.8 ತೀವ್ರತೆಯ ಭೂಕಂಪನಕ್ಕೆ ಬರೋಬ್ಬರಿ 33 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!