ಭಾರತಕ್ಕೆ ಬರ್ತಿದೆ ಟರ್ಕಿ ಈರುಳ್ಳಿ…

396

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಈರುಳ್ಳಿ ಬೆಲೆಯಲ್ಲಿ ಸಾಕಷ್ಟು ಏರಿಕೆ ಕಾಣ್ತಿದೆ. ಈಗಾಗ್ಲೇ ಅನೇಕ ರಾಜ್ಯಗಳಲ್ಲಿ ನೂರರ ಗಡಿದಾಟಿದೆ. ಇದ್ರಿಂದಾಗಿ ಜನಸಾಮಾನ್ಯರಿಗೆ ಹೈರಾಣಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಇದೀಗ ಟರ್ಕಿ ಮೊರೆ ಹೋಗಿದೆ.

ಟರ್ಕಿಯಿಂದ 11 ಸಾವಿರ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ಎಂಎಂಟಿಸಿಗೆ ಆದೇಶಿಸಲಾಗಿದೆ. ಈಜಿಪ್ಟ್ ನಿಂದ ಎಂಎಂಟಿಸಿ 6,900 ಟನ್ ಈರುಳ್ಳಿ ಆಮದು ಒಪ್ಪಂದಕ್ಕೆ ಸಹಿ ಹಾಕಿದೆ. ಮುಂದಿನ 10 ದಿನಗಳಲ್ಲಿ ಈರುಳ್ಳಿ ಭಾರತಕ್ಕೆ ಬರಲಿದೆ. ಇದರ ದರದ ಮೇಲೆ ನಿಗಾವಹಿಸಲು ಕೇಂದ್ರ ಗೃಹ ಸಚಿವಾಲಯ ತಂಡವೊಂದು ರೆಡಿ ಮಾಡಿದೆ.

ಈರುಳ್ಳಿ ರಫ್ತು ಮೇಲೆ ಈಗಾಗ್ಲೇ ನಿಷೇಧ ಹೇರಿರುವ ಭಾರತ, ನವೆಂಬರ್ 20ರಿಂದ 1.2 ಲಕ್ಷ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಅನುಮೋದನೆ ನೀಡಿತ್ತು. ತರಕಾರಿ, ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗ್ತಿರುವುದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!