12ನೇ ವರ್ಷದ ಪೋರ ಎಸ್ಎಸ್ಎಲ್ಸಿ ಪರೀಕ್ಷೆಗೆ ರೆಡಿ

455

ಆಸ್ಸಾಂ: 12 ವರ್ಷದ ಪೋರನೊಬ್ಬ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಸಿದ್ಧನಾಗಿದ್ದಾನೆ. ಹೀಗಾಗಿ ಮಣಿಪುರದ ನಾಡಿನ ಜನತೆ ಐಸಾಕ್ ಪೌಲಲ್ಲುಂಗ್ಮುವಾನ್ ಅನ್ನೋ ಬಾಲಕನನ್ನ ಕುತೂಹಲದಿಂದ ನೋಡ್ತಿದ್ದಾರೆ.

ಮಣಿಪುರದ ಅತಿ ಕಿರಿಯ ಬಾಲಕನೊಬ್ಬ 10ನೇ ತರಗತಿ ಪರೀಕ್ಷೆ ಬರೆಯುಲು ಸಜ್ಜಾಗಿದ್ದಾನೆ. ಈತನ ಐಕ್ಯೂ ಟೆಸ್ಟ್ ಮಾಡಲು ಡಿಪಾರ್ಟ್ ಮೆಂಟ್ ಆಫ್ ಕ್ಲಿನಿಕಲ್ ಸೈಕಾಲಜಿ ಹಾಗೂ ರಿಮ್ಸ್ ಇಂಪಾಲ್ ನಡೆಸಿದ ಪರೀಕ್ಷೆಯಲ್ಲಿ ಐಕ್ಯೂ 141 ಇದೆ ಅಂತಾ ಹೇಳಲಾಗ್ತಿದೆ.

ಚುರಂದಪುರ ಜಿಲ್ಲೆಯ ಕಾಂಗ್ವಾಯ್ ಗ್ರಾಮದ ಐಸಾಕ್, 10ನೇ ತರಗತಿ ಪರೀಕ್ಷೆ ಬರೆಯುತ್ತಿರುವ ಅತ್ಯಂತ ಕಿರಿಯ ವಿದ್ಯಾರ್ಥಿಯಾಗಿದ್ದಾನೆ. ಆತನನ್ನ ಮಾತ್ನಾಡಿಸಿದಾಗ ನನ್ಗೆ ಸಂತೋಷವಾಗ್ತಿದೆ ಹಾಗೂ ಉತ್ಸಕನಾಗಿದ್ದೇನೆ ಅಂತಾ ಹೇಳಿದ್ದಾನೆ. ಅಲ್ದೇ, ನಾನು ಸರ್ ಐಸಾಕ್ ನ್ಯೂಟನ್ ನನ್ನ ಇಷ್ಟು ಪಡುತ್ತೇನೆ. ನಾನು ಅವರಂತೆ ಇದ್ದೇನೆ. ಅವರ ಹೆಸರನ್ನ ಸಮನಾಗಿ ಹಂಚಿಕೊಳ್ಳುತ್ತೇನೆ ಅಂತಾ ಐಸಾಕ್ ಹೇಳಿದ್ದಾನೆ.

ಓದುಗರ ಗಮನಕ್ಕೆ



Leave a Reply

Your email address will not be published. Required fields are marked *

error: Content is protected !!