ಬೆಂಗಳೂರಿಗೆ ಬಂದ 120 ಟನ್ ಆಕ್ಸಿಜನ್

285

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಆಕ್ಸಿಜನ್ ಎಕ್ಸ್ ಪ್ರೆಸ್ ಟ್ರೇನ್ ಸಿಲಿಕಾನ್ ಸಿಟಿ ತಲುಪಿದೆ. ಇದೆ ಮೊದಲ ಬಾರಿಗೆ ಕರ್ನಾಟಕಕ್ಕೆ 120 ಟನ್ ಆಕ್ಸಿಜನ್ ಬಂದಿದೆ. 20 ಟನ್ ಆಕ್ಸಿಜನ್ ಹೊತ್ತ 6 ಕಂಟೈನರ್ ಗಳು ವೈಟ್ ಫೀಲ್ಡ್ ನಲ್ಲಿರುವ ಕಾರ್ಪೂರೇಷನ್ ಆಫ್ ಇಂಡಿಯಾ ಡಿಪೋಗೆ ಬಂದಿವೆ.

ಜಮ್ ಶೆಡ್ ಪುರದಿಂದ ಸೋಮವಾರ ಹೊರಟ ಟ್ರೇನ್ ಈಗ ಬೆಂಗಳೂರು ತಲುಪಿದೆ. 120 ಟನ್ ಆಕ್ಸಿಜನ್ ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಗುವುದು. ಅಲ್ಲಿಂದ ಸಣ್ಣ ಸಣ್ಣ ಟ್ಯಾಂಕರ್ ಗಳ ಮೂಲಕ ಅಗತ್ಯವಿರುವ ಆಸ್ಪತ್ರೆಗಳಿಗೆ ತಲುಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!