ಭೂಕಂಪನದಿಂದ ತತ್ತರಿಸಿರುವ ಸಿರಿಯಾ ಮೇಲೆ ಕ್ಷಿಪಣಿ ದಾಳಿ

206

ಪ್ರಜಾಸ್ತ್ರ ಸುದ್ದಿ

ಸಿರಿಯಾ: ತೀವ್ರ ಭೂಕಂಪನದಿಂದಾಗಿ ಸಾವಿರಾರು ಜನರ ಸಾವು ನೋವಿನಿಂದ ನರಳುತ್ತಿರುವ ಸಿರಿಯಾ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಈ ಮೂಲಕ ಮತ್ತಷ್ಟು ಜನರ ಜೀವ ತೆಗೆದಿದೆ. ಸಧ್ಯದ ವರದಿ ಪ್ರಕಾರ 15ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಡಮಾಸ್ಕಸ್ ಕೌಫ್ರಾ ನೌಸಾ ಹೊರವಲಯದಲ್ಲಿರುವ ವಸತಿ ಕಟ್ಟಡದ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ. ಇದರಿಂದಾಗಿ ಹಲವು ಕಟ್ಟಡಗಳು ಹಾನಿಗೊಳಗಾಗಿವೆ. 2011ರಿಂದ ಸಿರಿಯಾ ಹಾಗೂ ಇಸ್ರೇಲ್ ನಡುವೆ ವೈಮಾನಿಕ ದಾಳಿ ನಡೆಯುತ್ತಲೇ ಇದೆ. ಸಿರಿಯಾ ತೀವ್ರ ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ಇಸ್ರೇಲ್ ತನ್ನ ಆಟ ನಡೆಸಿದೆ.




Leave a Reply

Your email address will not be published. Required fields are marked *

error: Content is protected !!