ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ
ಇಸ್ರೇಲ್ ಪ್ಯಾಲೆಸ್ತೇನ್ ನಡುವಿನ ಯುದ್ಧದ ಜೊತೆಗೆ ಸಿರಿಯಾ ಸೇರಿಕೊಂಡಿದೆ. ಮಂಗಳವಾರ ರಾತ್ರಿ ಇಸ್ರೇಲ್ ನ ಪ್ರದೇಶದ ಮೇಲೆ ಸಿರಿಯಾ ರಾಕೆಟ್ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಬುಧವಾರ ಮುಂಜಾನೆ ಇಸ್ರೇಲ್ ಸಿರಿಯಾ ಮೇಲೆ ದಾಳಿ ಮಾಡಿದೆ.
ಸಿರಿಯಾ ಸೇನೆಯ ಮೌಲಸೌಕರ್ಯ ಹಾಗೂ ಲಾಂಚರ್ ಗಳ ಮೇಲೆ ಬುಧವಾರ ಮುಂಜಾನೆ ದಾಳಿ ನಡೆಸಲಾಗಿದೆ. ಲೆಬನಾನ್ ಜಿಜ್ಬುಲ್ಲಾ ಹಾಗೂ ಸಿರಿಯಾದಲ್ಲಿ ಉಗ್ರಗಾಮಿಗಳೊಂದಿಗೆ ಕಾಳಗದಲ್ಲಿ ಇಸ್ರೇಲ್ ತೊಡಗಿಕೊಂಡಿದೆ.