ಉ.ಕ ಪತ್ರಕರ್ತರಿಗೆ ಅನ್ಯಾಯ: ಸಿಎಂಗೆ ಮನವಿ

216

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಮಾಧ್ಯಮ ಅಕಾಡೆಮಿಯಿಂದ ಉತ್ತರ ಕರ್ನಾಟಕ ಭಾಗದ ಪತ್ರಕರ್ತರಿಗೆ ಆಗುತ್ತಿರುವ ಹಲವು ರೀತಿ ಅನ್ಯಾಯ, ತಾರತಮ್ಯವನ್ನು ಖಂಡಿಸಿ, ಭಾನುವಾರ ಮುಂಜಾನೆ ನಗರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಪ್ರತಿ ವರ್ಷ ನೀಡುವ ಪ್ರಶಸ್ತಿಯಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕವನ್ನು ಒಳಗೊಂಡಿರುವ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗುತ್ತಿದೆ. ಅನೇಕ ವರ್ಷಗಳಿಂದ, ದಶಕಗಳಿಂದ ಬೆಂಗಳೂರಿನಲ್ಲಿಯೇ ಕಾರ್ಯನಿರ್ವಹಿಸುತ್ತಿರುವವರನ್ನು ಅವರ ಮೂಲ ಜಿಲ್ಲೆಯನ್ನು ಉಲ್ಲೇಖಿಸಿ ಪ್ರಶಸ್ತಿ ಘೋಷಿಸಲಾಗುತ್ತಿದೆ. ಇದರಿಂದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಅನ್ಯಾಯವಾಗುತ್ತಿದೆ.

2019, 20, 21, 22ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅವರು ಸಧ್ಯ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಹೆಸರಿನ ಜೊತೆಗೆ ಮರುಪ್ರಕಟಿಸಬೇಕು. ಜೊತೆಗೆ ಮಾಧ್ಯಮ ಅಕಾಡೆಮಿಯಿಂದ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕೆಂದು ಹೇಳಿ ಸಿಎಂಗೆ ಮನವಿ ಸಲ್ಲಿಸಲಾಯಿತು. ಉತ್ತರ ಕರ್ನಾಟಕ ಭಾಗದ 110ಕ್ಕೂ ಹೆಚ್ಚು ಪತ್ರಕರ್ತಕರು ಮನವಿ ಪತ್ರಕ್ಕೆ ಸಮ್ಮತಿ ಸೂಚಿಸಿದ್ದಾರೆ.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಈ ತಾರತಮ್ಯದ ಕುರಿತು ನನ್ನ ಗಮನಕ್ಕೂ ಬಂದಿದೆ. ಇದೀಗ ನೀವು ಧ್ವನಿ ಎತ್ತಿದ್ದೀರಿ. ಈ ಬಗ್ಗೆ ಆದಷ್ಟು ಬೇಗ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ವಿಜಯ ಹೂಗಾರ, ಸಂಗಮೇಶ ಮೆಣಸಿನಕಾಯಿ, ಶಿವಾನಂದ ಗೊಂಬಿ, ಕಾಶಪ್ಪ ಕರದಿನ, ಅರುಣಕುಮಾರ್ ಹುರಳಿಮಠ, ಶಿವರಾಮ ಅಸುಂಡಿ, ಗುರುರಾಜ ಹೂಗಾರ, ಮಹೇಂದ್ರ ಚವಾಣ್, ಶಿವಕುಮಾರ ಪತ್ತಾರ, ಈರಣ್ಣ ವಾಯ್.ಡಬ್ಲು ಸೇರಿ ಇತರರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!