ಇಂಗ್ಲೆಂಡ್ ಸೆಮೀಸ್ ಗೆ.. ನ್ಯೂಜಿಲೆಂಡ್ ಚಿತ್ತ ಪಾಕ್ ಸೋಲಿನತ್ತ..

342

1992ರ ಬಳಿಕ ಇಂಗ್ಲೆಂಡ್ ಸೆಮಿಫೈನಲ್ ತಲುಪಿದೆ. ಗೆಲ್ಲಲೇಬೇಕಿದ್ದ ಕೊನೆಯ ಪಂದ್ಯದಲ್ಲಿ ಆಂಗ್ಲುರು ಕಿವೀಸ್ ಪಡೆಯನ್ನ ಸೋಲಿಸುವ ಮೂಲಕ ಸೆಮಿಫೈನಲ್ ತಲುಪಿದ ಮೂರನೇ ತಂಡವಾಗಿದೆ.

ಶತಕ ಸಿಡಿಸಿದ ಬ್ರೆಸ್ಟೋ

ನಿನ್ನೆ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 306 ರನ್ ಗಳ ಗುರಿಯನ್ನ ಬೆನ್ನು ಹತ್ತಿದ್ದ ವಿಲಿಯಮ್ಸನ್ ಟೀಂ, ಕೇವಲ 186ರನ್ ಗಳಿಗೆ ಸರ್ವಪತನ ಕಂಡಿದೆ. ಇದ್ರಿಂದಾಗಿ ಸೆಮಿಫೈನಲ್ ಹಾದಿ ದುರ್ಗಮವಾಗಿದ್ದು, ಪಾಕ್-ಬಾಂಗ್ಲಾ ನಡುವಿನ ಪಂದ್ಯದ ಮೇಲೆ ನ್ಯೂಜಿಲೆಂಡ್ ಭವಿಷ್ಯ ನಿಂತಿದೆ.

ಬ್ರೆಸ್ಟೋ ಶತಕದಾಟ ಹಾಗೂ ರಾಯ್ ಅರ್ಧಶತಕದಾಟದಿಂದಾಗಿ ಇಂಗ್ಲೆಂಡ್ 305 ರನ್ ಗಳಿಸಿತ್ತು. ಸರಾಸರಿ 6 ರನ್ ರೇಟ್ ಯಿದ್ದ ಪಂದ್ಯವನ್ನ ಗೆಲ್ಲುವಲ್ಲಿ ನ್ಯೂಜಿಲೆಂಡ್ ಫೇಲ್ ಆಗಿ, ಬೇರೆಯವರ ಪಂದ್ಯದ ಸೋಲು ಗೆಲುವಿನ ನಿರೀಕ್ಷೆಯಲ್ಲಿ ಉಳಿಯಬೇಕಾಗಿದೆ.

ನ್ಯೂಜಿಲೆಂಡ್ ಪರ ಟಾಮ್ ಲಥೀಮ್ ಅವರು ಅರ್ಧಶತಕದ ಹೊರ್ತಾಗಿ ಬೇರೆಯವರಿಂದ ದೊಡ್ಡದಾದ ಆಟ ಬರ್ಲಿಲ್ಲ. ಗುಪ್ತಿಲ್ 8, ನಿಕೋಲಸ್ ಜೀರೋ, ಕ್ಯಾಪ್ಟನ್ ವಿಲಿಯಮ್ಸನ್ 27, ಟೈಲರ್ 28, ಜಿಮ್ಮಿ ನೀಶಮ್ 19 ಹೀಗೆ.. ಲಥೀಮ್ ಬಿಟ್ರೆ ಟೈಲರ್ ಆಡಿದ 28ರನ್ ಗರಿಷ್ಟವಾಗಿದೆ. ಮಾರ್ಕ್ ವುಡ್ ನ ಮಾರಕ ದಾಳಿಗೆ ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಗಳು ತಳವೂರಿ ನಿಲ್ಲಲು ಆಗ್ಲಿಲ್ಲ. ವುಡ್ 9 ಓವರ್ ಗೆ 34 ರನ್ ನೀಡಿ ಪ್ರಮುಖ 3 ವಿಕೆಟ್ ಕಿತ್ತಿದ.

ಪಾಯಿಂಟ್ ಪಟ್ಟಿಯಲ್ಲಿ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದ್ದು, ಸೆಮಿಫೈನಲ್ ಏರಿ ಖುಷಿಯಾಗಿದೆ. 11 ಪಾಯಿಂಟ್ ಹೊಂದಿರುವ ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿದೆ. ಪಾಕ್ ಹಾಗೂ ಬಾಂಗ್ಲಾ ಎದುರಿನ ಪಂದ್ಯದಲ್ಲಿ ಒಂದು ವೇಳೆ ಪಾಕ್ ವಿನ್ ಆದ್ರೆ, ನ್ಯೂಜಿಲೆಂಡ್ ಮನೆಗೆ ಪಾಕ್ ಸೆಮೀಸ್ ಗೆ ಬರುತ್ತೆ. ಹೀಗಾಗಿ ನ್ಯೂಜಿಲೆಂಡ್ ಇದೀಗ ಪಾಕ್ ಸೋಲಲಿ ಅನ್ನೋದು ಹೇಳೋದು ಬಿಟ್ಟರೆ ಬೇರೆ ಏನೂ ಉಳಿದಿಲ್ಲ.




Leave a Reply

Your email address will not be published. Required fields are marked *

error: Content is protected !!