ಮಹಾರಾಣಿ ಕಾಲೇಜಿನಲ್ಲಿ ಪ್ರತಿಭಟನೆ ಮಾಡಿದರೆ ಮಾರ್ಕ್ಸ್ ಕಟ್!

256

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪರೀಕ್ಷೆ ಹೆಚ್ಚಳದ ವಿರುದ್ಧ ಕಳೆದ ಎರಡು ದಿನಗಳಿಂದ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದು, ಇಂದು ಅವರಿಗೆ ಮಾರ್ಕ್ಸ್ ಕಟ್ ಮಾಡುವ ಬೆದರಿಕೆ ಹಾಕಿ ಬಲವಂತದಿಂದ ತರಗತಿಗೆ ಹಾಜರಾಗುವಂತೆ ಮಾಡಿದ್ದಾರಂತೆ.

ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎನ್ಎಸ್ ಯುಐ ವಿದ್ಯಾರ್ಥಿನಿ ಸಂಘಟನೆ ನೇತೃತ್ವದಲ್ಲಿ ಇಂದು ತರಗತಿ ಬಹಿಷ್ಕಾರ ನಡೆಸಿದ್ದರು. ಆದರೆ, ಕಾಲೇಜು ಆಡಳಿತ ಮಂಡಳಿ ಪ್ರತಿಭಟನೆ ನಡೆಸಿದರೆ ಮಾರ್ಕ್ಸ್ ಕಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರಂತೆ.

ಕಳೆದ ಎರಡು ದಿನಗಳಿಂದ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದರು. ಇಂದು ತರಗತಿ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ವಿದ್ಯಾರ್ಥಿನಿಯರ ಹೋರಾಟಕ್ಕೆ ಕಿವಿಗೊಡದೆ ಅವರಿಗೆ ಅಂಕಗಳ ಬೆದರಿಕೆ ಹಾಕಿ ತರಗತಿಗೆ ಹಾಜರಾಗುವಂತೆ ಮಾಡಿದ್ದು, ಮತ್ತೊಂದು ರೀತಿಯ ಆಕ್ರೋಶಕ್ಕೆ ಕಾರಣವಾಗಿದೆ.




Leave a Reply

Your email address will not be published. Required fields are marked *

error: Content is protected !!