ವಾಟ್ಸಪ್, ಫೇಸ್ ಬುಕ್ ಸ್ಥಗಿತ: ಕ್ಷಮೆ ಕೇಳಿದ ಮಾರ್ಕ್ ಜುಗರ್ ಬರ್ಗ್

257

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಬೆಂಗಳೂರು: ಅಕ್ಟೋಬರ್ 4ರ ರಾತ್ರಿ 9ಗಂಟೆಯ ನಂತರ ವಾಟ್ಸಪ್, ಇನ್ಸ್ಟಾಗ್ರಾಮ್, ಫೇಸ್ ಬುಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಎಲ್ಲೆಡೆ ಸಾರ್ವಜನಿಕರು ಸಾಕಷ್ಟು ಒದ್ದಾಟ ನಡೆಸಿದರು. ಈ ಬಗ್ಗೆ ಫೇಸ್ ಬುಕ್ ಸಿಇಒ ಮಾರ್ಕ್ ಜುಗರ್ ಬರ್ಗ್ ಕ್ಷಮೆ ಕೇಳಿದ್ದಾರೆ.

ಈ ಮೂರು ಅಪ್ಲಿಕೇಷನ್ ಗಳು ಇವರ ಒಡೆತನದಲ್ಲಿವೆ. ಹೀಗಾಗಿ ಟೆಕ್ ಲೋಕದ ದಿಗ್ಗಜ ಮಾರ್ಕ್ ಜುಗರ್ ಬರ್ಗ್ ಕ್ಷಮೆ ಕೇಳಿದ್ದಾರೆ. ಯುಎಸ್ ನಲ್ಲಿ 1.7 ಮಿಲಿಯನ್, ಜರ್ಮನಿಯಲ್ಲಿ 1.3 ಮಿಲಿಯನ್ ಸೇರಿದಂತೆ ಎಲ್ಲೆಡೆಯಿಂದ 10.6 ಮಿಲಿಯನ್ ದೋಷ, ದೂರುಗಳು ಬಂದಿವೆ. ಇದರಿಂದಾಗಿ ಫೇಸ್ ಬುಕ್ ಸಂಸ್ಥೆಯ ಷೇರು ಶೇಕಡ 5.5ರಷ್ಟು ಕುಸಿತ ಕಂಡಿದೆ.

ಕ್ಯಾಲಿಫೋರ್ನಿಯಾದಲ್ಲಿರುವ ಮುಖ್ಯ ಕಚೇರಿಯಲ್ಲಿರುವ ಸರ್ವರ್ ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಕಳೆದ ರಾತ್ರಿ ಸಮಸ್ಯೆ ಕಂಡು ಬಂದಿದೆ.




Leave a Reply

Your email address will not be published. Required fields are marked *

error: Content is protected !!