ಬೆಂಗಳೂರಲ್ಲೂ ನಕಲಿ ನಂದಿನಿ ತುಪ್ಪ

477

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮೈಸೂರು ಬಳಿಕ ಇದೀಗ ಸಿಲಿಕಾನ್ ಸಿಟಿಯಲ್ಲೂ ನಕಲಿ ನಂದಿನಿ ತುಪ್ಪ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಲಾಗಿದೆ. ಈ ಬಗ್ಗೆ ಕೆಎಂಎಫ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಜಯನಗರ, ಹನುಮಂತನಗರ, ರಾಜಾಜಿನಗರ, ಮಾಕಳಿ, ನೆಲಮಂಗಳ, ಹೊಸಕೋಟೆಯ ದೇವನಗೊಂದಿ ಸೇರಿ ಹಲವು ಕಡೆ ಅಂಗಡಿ ಹಾಗೂ ಗೋದಾಮುಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ನಂದಿನಿ ತುಪ್ಪದ 1000 ಮಿಲಿ ಸ್ಯಾಚೆ, 15 ಟನ್ ನಕಲಿ ಮಾದರಿ ತುಪ್ಪ ಪತ್ತೆಯಾಗಿದೆ.

ಮೈಸೂರಿನಲ್ಲಿ ತಯಾರಿಸಲಾಗುತ್ತಿದ್ದ ನಕಲಿ ನಂದಿನಿ ತುಪ್ಪ ಬೆಂಗಳೂರಿನ ವಿವಿಧ ಕಡೆ ಮಾರಾಟವಾಗುತ್ತಿದೆ ಅನ್ನೋ ಮಾಹಿತಿ ಆಧಾರದ ಮೇಲೆ ಕೆಎಂಎಫ್ ಅಧಿಕಾರಿಗಳು ವಿಶೇಷ ತಂಡ ರಚನೆ ಮಾಡಿ ದಾಳಿ ನಡೆಸಿದರು.




Leave a Reply

Your email address will not be published. Required fields are marked *

error: Content is protected !!