ಹಂದಿ ಹೃದಯ ಕಸಿಗೆ ಒಳಗಾಗಿದ್ದ ವ್ಯಕ್ತಿ ನಿಧನ

511

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ವಾಷಿಂಗ್ಟನ್: ಜಗತ್ತಿನಲ್ಲಿಯೇ ಮೊದಲ ಬಾರಿಗೆ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. 57 ವರ್ಷದ ಡೇವಿಡ್ ಬೆನೆಟ್ ಚಿಕಿತ್ಸೆಯಾದ 2 ತಿಂಗಳಲ್ಲೇ ಮೃತಪಟ್ಟಿದ್ದಾನೆ.

ಈ ಚಿಕಿತ್ಸೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಮನುಷ್ಯನಿಗೆ ಮೊದಲ ಬಾರಿಗೆ ಪ್ರಾಣಿಯ ಹೃದಯ ಅಳವಾಡಿಸಲಾಗಿತ್ತು. ಈ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗುತ್ತೆ ಅನ್ನೋ ಭರವಸೆ ಹೊಂದಿದವರಿಗೆ ನಿರಾಸೆ ಮೂಡಿಸಿದೆ.

ಮೇರಿಲ್ಯಾಂಡ್ ನಿವಾಸಿಯಾಗಿದ್ದ ಬೆನೆಟ್ ಹೃದಯ-ಶ್ವಾಸಕೋಶದ ಬೈಪಾಸ್ ಮಿಷನ್ ಸಮಸ್ಯೆಯಿಂದ ಬಳಲುತ್ತಿದ್ದರು. ಬದುಕುವ ಬಗ್ಗೆ ಸಾಕಷ್ಟು ಆಸೆ ಇಟ್ಟುಕೊಂಡಿದ್ದರು. ಚಿಕಿತ್ಸೆಯಾದ ಎರಡು ತಿಂಗಳಲ್ಲೇ ಮೃತಪಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!