ದೇಶದಲ್ಲಿ ಆ.2ರ ಸ್ನೇಹಿತರ ದಿನಾಚರಣೆ ಜು.30ಕ್ಕೆ ಟ್ರೆಂಡ್ ಆಗಿದ್ಯಾಕೆ?

374

ಸೋಷಿಯಲ್ ಮೀಡಿಯಾದಲ್ಲಿ ಜುಲೈ 30 ರಂದು ಭರ್ಜರಿಯಾಗಿ ಟ್ರೆಂಡ್ ಆಗಿರುವುದು ಸ್ನೇಹಿತರ ದಿನಾಚರಣೆ. ಭಾರತದಲ್ಲಿ ಆಗಸ್ಟ್ ಮೊದಲ ಭಾನುವಾರವನ್ನ ಸ್ನೇಹಿತರ ದಿನಾಚರಣೆ ಎಂದು ಆಚರಿಸಲಾಗುತ್ತೆ. ಅಂದ್ರೆ, ಈ ವರ್ಷ ಆಗಸ್ಟ್ 2ರಂದು ಆಚರಿಸಬೇಕು. ಆದ್ರೆ, ಬಹುತೇಕರು ಜುಲೈ 30ರಂದೇ ಆಚರಿಸಿದ್ದಾರೆ.

ಫ್ರೆಂಡ್ ಶಿಪ್ ಡೇ ಕಥೆಗಳು:

ಪರಾಗ್ವೆನಲ್ಲಿ ಜುಲೈ 30, 1958ರಲ್ಲಿ ಇದನ್ನ ಆಚರಣೆಗೆ ತರಲಾಯ್ತು ಅಂತಾರೆ. ಅಮೆರಿಕಾದಲ್ಲಿ ಒಬ್ಬನ ಕೊಲೆಯಾಗುತ್ತೆ. ಇದರಿಂದ ಬೇಸತ್ತ ಸ್ನೇಹಿತ ಆತನ ನೆನಪಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹೀಗಾಗಿ 1935ರಲ್ಲಿ ಅಮೆರಿಕ ಸ್ನೇಹಿತರ ದಿನಾಚರಣೆ ಶುರು ಮಾಡಿತು ಅಂತಾರೆ. ಸ್ನೇಹಿತರ ನಡುವಿನ ದ್ವೇಷ, ಹಗೆತನ ಕಡಿಮೆ ಮಾಡಲು ಈ ದಿನವನ್ನ ಆಚರಿಸಲಾಗುತ್ತೆ ಅಂತಾರೆ. ಹೀಗೆ ಹಲವು ಕಥೆಗಳಿವೆ. ಯಾವುದು ಸತ್ಯ, ಸುಳ್ಳು ಗೊತ್ತಿಲ್ಲ.

ಇಷ್ಟೆಲ್ಲ ಕಥೆಗಳ ನಡುವೆ ವಿಶ್ವಸಂಸ್ಥೆ ಏಪ್ರಿಲ್, 2011ರಲ್ಲಿ ಜುಲೈ 30 ಅಂತಾರಾಷ್ಟ್ರೀಯ ಸ್ನೇಹಿತರ ದಿನಾಚರಣೆ ಎಂದು ಘೋಷಿಸಿತು. ಆದ್ರೆ, ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಇದನ್ನ ಆಚರಣೆ ಮಾಡಿಕೊಂಡು ಬರಲಾಗ್ತಿದೆ. ಭಾನುವಾರ ಯಾಕೆ ಅಂದ್ರೆ, ಅಂದು ರಜೆ ಇರುವುದ್ರಿಂದ ಸ್ನೇಹಿತರೆಲ್ಲ ಸೇರಿಕೊಂಡು ಖುಷಿ ಖುಷಿಯಾಗಿ ಕಾಲ ಕಳೆಯಬಹುದೆಂದು.

ಭಾರತದಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರ ಸ್ನೇಹಿತರ ದಿನಾಚರಣೆ ಆಚರಿಸಿಕೊಂಡು ಬರಲಾಗ್ತಿದೆ. ಆದ್ರೆ, ಈ ಬಾರಿ ಜುಲೈ 30ರಂದು ಸೋಷಿಯಲ್ ಮೀಡಿಯಾದಲ್ಲಿ ಟ್ರಂಡ್ ಆಗಿ ಹಲವರು ಗೊಂದಲಕ್ಕೂ ಒಳಗಾಗಿದ್ರು. ಆಗಸ್ಟ್ 2ಕ್ಕೆ ದೇಶದಲ್ಲಿ ಮತ್ತೊಮ್ಮೆ ಸ್ನೇಹಿತರ ದಿನಾಚರಣೆ ಆಚರಿಸಿದ್ರೂ ಅಚ್ಚರಿಯೇನಿಲ್ಲ.




Leave a Reply

Your email address will not be published. Required fields are marked *

error: Content is protected !!